ಸಾಲ ಪಡೆದವರಿಗೆ ಸಿಹಿ ಸುದ್ದಿ | ಸಾಲ ನೀಡುವ ಆ್ಯಪ್ ಗಳನ್ನು ಪ್ಲೇಸ್ಟೋರ್ ನಿಂದ ಕಿತ್ತೆಸೆದ ಗೂಗಲ್ - Mahanayaka

ಸಾಲ ಪಡೆದವರಿಗೆ ಸಿಹಿ ಸುದ್ದಿ | ಸಾಲ ನೀಡುವ ಆ್ಯಪ್ ಗಳನ್ನು ಪ್ಲೇಸ್ಟೋರ್ ನಿಂದ ಕಿತ್ತೆಸೆದ ಗೂಗಲ್

14/01/2021

ನವದೆಹಲಿ:  ವೈಯಕ್ತಿಕ ಸಾಲ ನೀಡುವ ಆ್ಯಪ್ ಗಳನ್ನು ಗೂಗಲ್ ಪ್ಲೇಸ್ಟೋರ್ ನಿಂದ ಗುರುವಾರ ತೆಗೆದು ಹಾಕಲಾಗಿದ್ದು,  ಸುರಕ್ಷಿತವಲ್ಲ ಎಂದು ಕಂಡು ಬಂದ ಆ್ಯಪ್ ಗಳನ್ನು ಗೂಗಲ್ ನಿರ್ದಯವಾಗಿ ಕಿತ್ತು ಹಾಕಿದೆ.

ಯಾವೆಲ್ಲ ಆ್ಯಪ್ ಗಳನ್ನು ತೆಗೆದು ಹಾಕಲಾಗಿದೆ ಎಂಬ ಬಗ್ಗೆ ಗೂಗಲ್ ಇನ್ನೂ ಹೆಸರು ಬಹಿರಂಗ ಪಡಿಸಿಲ್ಲ.  ಆದರೆ, ನಮ್ಮ ಬಳಕೆದಾರರ ಸುರಕ್ಷತೆಯೇ ನಮಗೆ ಮುಖ್ಯವಾಗಿದ್ದು, ನೂರಾರು ಸಾಲ ನೀಡುವ ಅಪ್ಲಿಕೇಶನ್ ನ್ನು ಪರಿಶೀಲಿಸಿ ಪ್ಲೇಸ್ಟೋರ್ ನಿಂದ ತೆಗೆದು ಹಾಕಲಾಗಿದೆ ಎಂದು ಗೂಗಲ್ ಹೇಳಿದೆ.

ಡಿಜಿಟಲ್ ಸಾಲ ನೀಡಿಕೆಯ ಕ್ರಮಬದ್ಧ ಬೆಳವಣಿಗೆಯನ್ನು ಉತ್ತೇಜಿಸಲು ನಿಯಂತ್ರಕ ಕ್ರಮಗಳನ್ನು ಸೂಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕಾರ್ಯಕಾರಿ ಸಮಿತಿಯೊಂದನ್ನು ರಚಿಸುವುದಾಗಿ ಬುಧವಾರ ಪ್ರಕಟಿಸಿದೆ. ಅನಧಿಕೃತ ಡಿಜಿಟಲ್ ಸಾಲ ನೀಡುವ ವೇದಿಕೆಗಳು ಮತ್ತು ಮೊಬೈಲ್ ಆಯಪ್ ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಬಲಿಯಾಗದಂತೆ ಆರ್ ಬಿಐ ಕಳೆದ ತಿಂಗಳು ಎಚ್ಚರಿಕೆ ನೀಡಿತ್ತು.

ಆರ್ ಬಿಐ ನ ಎಚ್ಚರಿಕೆಯ ಬೆನ್ನಲ್ಲೇ,  ಗೂಗಲ್‌ನ ಉತ್ಪನ್ನಗಳಾದ್ಯಂತ ಸುರಕ್ಷಿತ ಮತ್ತು ಸುರಕ್ಷಿತ ಅನುಭವವನ್ನು ನೀಡುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಜಾಗತಿಕ ಉತ್ಪನ್ನ ನೀತಿಗಳನ್ನು ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ನಾವು ಹಲವು ಉತ್ಪನಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ, ಮತ್ತು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ನಮ್ಮ ಅಭ್ಯಾಸಗಳನ್ನು ಸುಧಾರಿಸಲು ನಾವು ಯಾವಾಗಲೂ ಕೆಲಸ ಮಾಡುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.

ಇತ್ತೀಚಿನ ಸುದ್ದಿ