ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿದ: ಕಾರು ಇಳಿದದ್ದು ಭತ್ತದ ಗದ್ದೆಗೆ!
ಮಲಪ್ಪುರಂ: ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿದ ವ್ಯಕ್ತಿಯೋರ್ವರು ಭತ್ತದ ಗದ್ದೆಗೆ ಕಾರು ಇಳಿಸಿದ ಘಟನೆ ಕೇರಳದ ಮಲಪ್ಪರಂನಲ್ಲಿ ನಡೆದಿದ್ದು, ಸ್ವಲ್ಪದರಲ್ಲೇ ಅವರ ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.
ತಿರೂರ್ ಮೂಲದ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಪೊನ್ಮುಂಡದಿಂದ ಪುದುಪರಂಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಗೂಗಲ್ ಮ್ಯಾಪ್ ನ ನಿರ್ದೇಶನದಲ್ಲಿ ಅವರು ಕಾರು ಚಲಾಯಿಸುತ್ತಿದ್ದರು.
ಕೇವಲ 8 ಕಿಲೋ ಮೀಟರ್ ದೂರದವರೆಗೆ ಗೂಗಲ್ ನ ಸಹಾಯದೊಂದಿಗೆ ಅವರು ಪ್ರಯಾಣಿಸಿದ್ದಾರೆ. ಪ್ರಯಾಣದ ನಡುವೆ ಇಳಿ ಜಾರಿನ ರಸ್ತೆಯೊಂದು ಸಿಕ್ಕಿದ್ದು ನೋಡ ನೋಡುತ್ತಿದ್ದಂತೆಯೇ ಕಾರು ನೇರವಾಗಿ ಗದ್ದೆಯೊಂದಕ್ಕೆ ಜಾರಿದೆ.
ಜನ ವಸತಿ ಪ್ರದೇಶವೂ ಅಲ್ಲದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆದರೆ, ತಕ್ಷಣವೇ ಕಾರಿನಿಂದ ಇಳಿದ ಕುಟುಂಬಸ್ಥರು ಸ್ಥಳದಿಂದ ಹೇಗೋ ಪಾರಾಗಿದ್ದಾರೆ. ಬಳಿಕ ಕಾರನ್ನು ಅಲ್ಲೇ ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣಿಸಿದ್ದಾರೆ.
ಮರು ದಿನ ಬೆಳಗ್ಗೆ ಕಾರನ್ನು ಬೇರೊಂದು ವಾಹನವನ್ನು ಬಳಸಿ ಗದ್ದೆಯಿಂದ ಹೊರಕ್ಕೆಳೆಯಲಾಗಿದೆ. ಗೂಗಲ್ ಮ್ಯಾಪ್ ನೋಡಿ ನಗರದ ಹೊರ ಪ್ರದೇಶಗಳಲ್ಲಿ ಪ್ರಯಾಣಿಸಿದ ಸಾಕಷ್ಟು ಜನರಿಗೆ ಇಂತಹ ಅನುಭವಗಳಾಗಿವೆ. ರಸ್ತೆಗಳ ಸರಿಯಾದ ಮಾಹಿತಿ ಇಲ್ಲದೇ ಪ್ರಯಾಣಿಸುವುದು ಅಪಾಯಕಾರಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka