ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿ ಬಿಡುಗಡೆ: ‘ಜೈ ಭೀಮ್’ಗೆ ಮೊದಲ ಸ್ಥಾನ - Mahanayaka
8:26 AM Thursday 12 - December 2024

ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿ ಬಿಡುಗಡೆ: ‘ಜೈ ಭೀಮ್’ಗೆ ಮೊದಲ ಸ್ಥಾನ

jai bheem
11/12/2021

ಚೆನ್ನೈ: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ನಟ ಸೂರ್ಯ ಅಭಿನಯದ ‘ಜೈ ಭೀಮ್’ ಚಿತ್ರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ದೇಶಾದ್ಯಂತ ಹವಾ ಸೃಷ್ಟಿಸಿದ್ದ ‘ಜೈ ಭೀಮ್’ ಚಿತ್ರ ವಿದೇಶದಲ್ಲಿ ಕೂಡ ಸದ್ದು ಮಾಡಿತ್ತು. ಚಿತ್ರ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಕೆಲವರು ಚಿತ್ರದ ಮೇಲೆ ನಿರಂತರವಾಗಿ ಕೇಸ್ ಕೂಡ ದಾಖಲಿಸಲು ಆರಂಭಿಸಿದ್ದರು. ಆದರೆ, ‘ಜೈ ಭೀಮ್’ ಚಿತ್ರಕ್ಕೆ ಸಣ್ಣ ಹಾನಿಯೂ ಆಗದೇ ಚಿತ್ರ ಮುನ್ನುಗ್ಗುತ್ತಲೇ ಇದೆ. ಈಗಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದೆ.

2021ರಲ್ಲಿ ಕೊರೊನಾ ಚಿತ್ರರಂಗಕ್ಕೆ ದೊಡ್ಡ ಹೊಡೆತ ನೀಡಿತ್ತು. ಥಿಯೇಟರ್ ಗಳು ಕೂಡ ಬಾಗಿಲು ಮುಚ್ಚಿತ್ತು. ಈ ವೇಳೆ ಒಟಿಟಿಯಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿ ಜನರ ಮೆಚ್ಚುಗೆ ಗಳಿಸಿದ್ದವು. ಈ ಪೈಕಿ ಸೂರ್ಯ ನಟನೆಯ ಜೈ ಭೀಮ್ ಚಿತ್ರ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರೇಕ್ಷಕರು ವೀಕ್ಷಿಸಿದ ಚಿತ್ರಗಳನ್ನು ಆಧರಿಸಿದ ಎಂಟರ್ಟೈನ್ ಮೆಂಟ್ ಪೋರ್ಟಲ್ ಐಎಂಡಿಬಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಗುವನ್ನು ಹಿಡಿದುಕೊಂಡಿದ್ದ ವ್ಯಕ್ತಿಯ ಮೇಲೆ ಲಾಠಿ ಚಾರ್ಜ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ

ಸಿಎಂ ಸ್ಥಾನದಿಂದ ಇಳಿಯುತ್ತಾರಾ ಬಸವರಾಜ್ ಬೊಮ್ಮಾಯಿ? | ಬಲವಾಗಿ ಕೇಳಿ ಬರುತ್ತಿರುವ ಚರ್ಚೆಗಳೇನು ಗೊತ್ತಾ?

ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ: ಕೋಳಿ, ಬಾತುಕೋಳಿ, ಮೊಟ್ಟೆಗಳನ್ನು ನಾಶಪಡಿಸಲು ಆದೇಶ

ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ: ಮಹಿಳೆಯ ದಾರುಣ ಸಾವು

1 ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ! | ಒಂದು ಚಮಚ ಕತ್ತೆಯ ಹಾಲಿಗೆ 100 ರೂಪಾಯಿ!

ವಿಶ್ವ ಮಾನವ ಹಕ್ಕುಗಳ ದಿನಾಚರಣೆ | ಸಂತ್ರಸ್ತರ ಪಾಲಿನ ಆಶಾಕಿರಣ ‘ಸಿಕ್ರಂ’: ಡಾ.ದೇವರಾಜು.ಎಸ್.ಎಸ್. 

ಇತ್ತೀಚಿನ ಸುದ್ದಿ