ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರಿಂದ ದಾಳಿ
ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರು ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯ ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ 22 ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಈ ಘಟನೆಯಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ದುರ್ಗಾ ದೇವಿಯ ದೇವಸ್ಥಾನದಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇದೇ ವೇಳೆ ಬಾಂಗ್ಲಾದೇಶದ ಚಂದ್ ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್ ಖಲಿ ಮತ್ತು ಕಾಕ್ಸ್ ಬಜಾರ್ ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಎಬ್ಬಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂದು ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಜನರ ನಡುವೆಯೂ ಗಲಾಟೆ ನಡೆದಿದೆ. ಹೀಗಾಗಿ ಸರ್ಕಾರ ಹೆಚ್ಚುವರಿ ಭದ್ರತಾ ಪಡೆಯನ್ನು ನಿಯೋಜಿಸಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಕೋಟಿಗೊಬ್ಬ-3 ಬಿಡುಗಡೆಗೆ ಯಾರಿಂದ ತೊಂದರೆ ಆಯ್ತು ಅಂತ ಗೊತ್ತಿದೆ | ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI
ಪರಿವರ್ತನೆ ಬಯಸುವ ಚಲನಶೀಲ ಮನುಷ್ಯರಿಗೆಲ್ಲರಿಗೂ 65ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು
ಹಬ್ಬದ ದಿನವೇ ಘೋರ ಕೃತ್ಯ: ಸಾಂಬರ್ ಚೆನ್ನಾಗಿಲ್ಲ ಎಂದು ತಾಯಿ, ತಂಗಿಯನ್ನು ಗುಂಡು ಹಾರಿಸಿಕೊಂಡ ಪಾಪಿ!
12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್
ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದವರು ಸಾಕ್ಷ್ಯ ನೀಡಿದ್ದಾರೆ | ನಳಿನ್ ಕುಮಾರ್ ಕಟೀಲ್
ವೋಟ್ ಬ್ಯಾಂಕ್ ಗಾಗಿ ದಸರಾ ಹೆಸರಲ್ಲಿ ಜನರ ತೆರಿಗೆ ಹಣ ಲೂಟಿ | ಸುನೀಲ್ ಕುಮಾರ್ ಬಜಾಲ್ ಆರೋಪ