ಗೋಶಾಲೆಗಳನ್ನೇ ಮಾಂಸ ಮಾರಾಟ ಕೇಂದ್ರಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ | ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ - Mahanayaka

ಗೋಶಾಲೆಗಳನ್ನೇ ಮಾಂಸ ಮಾರಾಟ ಕೇಂದ್ರಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ | ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ

kodihalli chandrashekhar
21/09/2021

ಲಿಂಗಸುಗೂರು:  ಗೋಶಾಲೆಗಳನ್ನು ಆಂಭಿಸಲು ಉತ್ತೇಜನ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರೋಕ್ಷವಾಗಿ  ಜಾನುವಾರು ಮಾಂಸ ಮಾರಾಟ ಕೇಂದ್ರವನ್ನಾಗಿಸುವ ಹುನ್ನಾರ ನಡೆಸಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರೈತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,  ರಾಷ್ಟ್ರದಲ್ಲಿ ಜಾನುವಾರು(ಬೀಫ್) ಮಾಂಸ ರಫ್ತು ಮಾಡುವ 17 ಏಜೆನ್ಸಿಗಳಿವೆ. ಆ ಪೈಕಿ ಒಂದು ಮುಸ್ಲಿಮ್ ವ್ಯಕ್ತಿಯ ಮಾಲಿಕತ್ವದಲ್ಲಿದ್ದರೆ, ಉಳಿದ 16 ಏಜೆನ್ಸಿಗಳು ಜೈನ ಮತ್ತು ಬ್ರಾಹ್ಮಣ ಸಮುದಾಯದವರ ಮಾಲಿಕತ್ವದಲ್ಲಿದೆ. ಈ ಎಲ್ಲ ಏಜೆನ್ಸಿಗಳು ಕಾಂಗ್ರೆಸ್ ಮತ್ತು ಬಿಜೆಪಿ ಕೃಪಾಕಟಾಕ್ಷದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರುವ ಬದಲು ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಯತ್ನ ನಡೆದಿದೆ. ಈ ನೆಪದಲ್ಲಿ ಜಾನುವಾರುಗಳನ್ನು ಸಾಕಿದ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದು, ಇದರ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ಚುರುಕುಗೊಳಿಸುತ್ತೇವೆ ಎಂದು ಕೋಡಿಹಳ್ಳಿ ಎಚ್ಚರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಮಾಟ ಮಂತ್ರದ ಕಾರಣ ನೀಡಿ, ಶಿಕ್ಷಣ ಸಂಸ್ಥೆಗೆ ನುಗ್ಗಿ ಮೂವರು ಮಹಿಳೆಯರಿಗೆ ತಲವಾರು ಬೀಸಿದ ಯುವಕ | ಓರ್ವ ಮಹಿಳೆ ಸ್ಥಿತಿ ಗಂಭೀರ

ಮಂತ್ರವಾದಿಯ ಮಾತು ನಂಬಿ, ನಿಧಿಗಾಗಿ ಮನೆಯೊಳಗೆ 20 ಅಡಿ ಗುಂಡಿ ತೋಡಿದ!

ದೆವ್ವ ಬಿಡಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು 16ರ ಬಾಲಕಿಯ ಮೇಲೆ ಸಾಧುವಿನಿಂದ ಅತ್ಯಾಚಾರ!

2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು

ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ

ಸುಳ್ಳು ಜಾತಿ ಪ್ರಮಾಣ ಪತ್ರ:  ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್

ಇತ್ತೀಚಿನ ಸುದ್ದಿ