ಸರ್ಕಾರಿ ಲೈಬ್ರೆರಿಗಳಲ್ಲಿ ಅಂಬೇಡ್ಕರ್ ಪುಸ್ತಕಗಳ ಬಗ್ಗೆ ಯಾಕೆ ಈ ಅಸಡ್ಡೆ?
- ಅಶ್ವಿನ್ ಕುಮಾರ್, ಚೆಂಡ್ತಿಮಾರ್
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವದ ಗ್ರಂಥಾಲಯ ಎಂದೇ ಕರೆಯುತ್ತಾರೆ. ಆದರೆ, ರಾಜ್ಯ ಮತ್ತು ದೇಶದ ಗ್ರಂಥಾಲಯಗಳಲ್ಲಿ ಅಂಬೇಡ್ಕರ್ ಅವರ ಬಗೆಗಿನ ಪುಸ್ತಕಗಳಿಗೆ ಜಾಗವೇ ಇಲ್ಲದಂತಹ ಪರಿಸ್ಥಿತಿಗಳು ಕಂಡು ಬಂದಿದೆ. ಬೇರೆಲ್ಲ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಎಲ್ಲರಿಗೆ ಕಾಣುವಂತೆ ಇಡಲಾಗುತ್ತಿದೆ. ಆದರೆ ಅಂಬೇಡ್ಕರ್ ಅವರ ಬಗೆಗಿನ ಪುಸ್ತಕಗಳು ಯಾವುದೋ ಒಂದು ಮೂಲೆಯಲ್ಲಿರಿಸಿ, ಜನರಿಗೆ ಸಿಗದಂತೆ ಅಡಗಿಸಿಡಲಾಗುತ್ತಿದೆ ಎನ್ನುವ ಅಸಮಾಧಾನಗಳು ಕೇಳಿ ಬಂದಿವೆ.
ಇಂದು ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಬೇಕು ಎನ್ನುವ ನಾನಾ ಹೋರಾಟಗಳು ನಡೆಯುತ್ತಿವೆ. ಆದರೆ, ಗ್ರಂಥಾಲಯಗಳಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಸ್ತಕಗಳನ್ನು ಮರೆಮಾಚುತ್ತಿರುವ ಬಗ್ಗೆ ಒಂದೇ ಒಂದು ಹೋರಾಟವಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂದಿನ ಸಮಾಜಕ್ಕೆ ಅಂಬೇಡ್ಕರ್ ಅವರು ಎಷ್ಟು ಪ್ರಸ್ತುತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಅಂಬೇಡ್ಕರ್ ಅವರನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಕೇ? ಅವರ ಪುಸ್ತಕಗಳು ರಾಜ್ಯದ ಎಷ್ಟು ಲೈಬ್ರೆರಿಗಳಲ್ಲಿವೆ ಎಂಬ ಬಗ್ಗೆ ಸಂಬಂಧಪಟ್ಟವರ ಬಳಿಯಲ್ಲಿ ವಿಚಾರಿಸುವುದು ಬೇಡವೇ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.
‘ಬಾಬಾ ಸಾಹೇಬರ ಸಮಗ್ರ ಬರಹ ಮತ್ತು ಭಾಷಣ’ಗಳ 22 ಸಂಪುಟಗಳನ್ನು ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯಿಂದ ಮುದ್ರಣವಾಗಿರುವ ವಿಚಾರ ಸಂತೋಷಕರ ವಿಚಾರವಾಗಿದೆ. ಆದರೆ, ಈ ಪುಸ್ತಕ ಜಿಲ್ಲಾ ಕೇಂದ್ರ ಲೈಬ್ರೆರಿಗಳಲ್ಲಿಯೇ ಸಿಗುತ್ತಿಲ್ಲ. ಜೊತೆಗೆ ಅಂಬೇಡ್ಕರ್ ಅವರು ಬರೆದ ಪುಸ್ತಕಗಳು ಕೂಡ ಜಿಲ್ಲಾ ಕೇಂದ್ರ ಲೈಬ್ರೆರಿಗಳಲ್ಲಿಯೇ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಸಾವಿರಾರು ಸಂಘಟನೆಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿವೆ. ಅಂಬೇಡ್ಕರ್ ವಾದಿ ಶಾಸಕರು, ಸಂಸದರು ಇದ್ದಾರೆ. ಇವರು ಯಾರು ಕೂಡ ಈ ಬಗ್ಗೆ ಯಾಕೆ ವಿಚಾರಿಸುತ್ತಿಲ್ಲ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯ ಫಲವನ್ನು ಉಣ್ಣುತ್ತಿರುವ ನೌಕರರು ಈ ಬಗ್ಗೆ ಯಾಕೆ ಈ ಬಗ್ಗೆ ವಿಚಾರಿಸುತ್ತಿಲ್ಲ? ಅಂಬೇಡ್ಕರ್ ಅವರ ಹೆಸರಿನಲ್ಲಿ ಬಹಳಷ್ಟು ಸಂಘಟನೆಗಳಿದ್ದರೂ ಇಂತಹ ವಿಚಾರಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇದಲ್ಲದೇ ಲೈಬ್ರೆರಿಯಲ್ಲಿ ಅಂಬೇಡ್ಕರ್ ಅವರ ಮೀಸಲಾತಿಯ ಋಣದಲ್ಲಿ ಕೆಲಸ ಪಡೆದುಕೊಂಡು ಕೆಲಸ ಮಾಡುವವರು ಈ ಬಗ್ಗೆ ಅಸಡ್ಡೆ ತೋರುತ್ತಿರುವುದಕ್ಕೆ ಏನನ್ನಬೇಕೋ ತಿಳಿದಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು ಈ ಕಾಲಕ್ಕೆ ಪ್ರಸ್ತುತವಾಗಿದೆ. ಹಾಗಾಗಿ ಅವರ ಎಲ್ಲ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಇಂದಿನ ಯುವ ಪೀಳಿಗೆಗೆ ಸಿಗುವಂತೆ ಮಾಡಲು ಸರ್ಕಾರ ಮುಂದಾಗಬೇಕು. ಈ ಬಗ್ಗೆ ಅಂಬೇಡ್ಕರ್ ಪ್ರೇಮಿ ರಾಜಕಾರಣಿಗಳು ಶ್ರಮಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಪ್ರಸ್ತುತ ಸನ್ನಿವೇಶದಲ್ಲಿ ದೇಶದ ಮುಂದಿನ ಪೀಳಿಗೆ ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳದೇ ಭಾರತವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎಷ್ಟು ಲೈಬ್ರೆರಿಗಳಲ್ಲಿ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಪುಸ್ತಕಗಳಿಲ್ಲ ಎಂಬ ಬಗ್ಗೆ ಪ್ರಶ್ನಿಸಲು ಅಂಬೇಡ್ಕರ್ ವಾದಿ ಸಂಘಟನೆಗಳು ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!
ಬೆಂಗಳೂರಿನಲ್ಲಿ ಎರಡು ಬಾರಿ ಭೂಕಂಪನದ ಅನುಭವ: ಮಂಡ್ಯದಲ್ಲಿ ಕೇಳಿ ಬಂತು ನಿಗೂಢ ಶಬ್ಧ!
ವರದಕ್ಷಿಣೆ ನೀಡಲು ಕೂಡಿಟ್ಟಿದ್ದ 75 ಲಕ್ಷ ರೂ. ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ದಾನ ಮಾಡಿದ ಯುವತಿ!
ಮಹಿಳಾ ಸಿಬ್ಬಂದಿಗಳೊಂದಿಗೆ ಆರೋಗ್ಯಾಧಿಕಾರಿ ಚೆಲ್ಲಾಟ: ವಿಡಿಯೋ ವೈರಲ್
ತೀವ್ರ ಎದೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಅಣ್ಣಾ ಹಜಾರೆ
ವಿಚಾರಣೆಗೆ ಹಾಜರಾದ ಹಂಸಲೇಖ: ಠಾಣೆ ಎದುರು ಪರ ವಿರೋಧ ಪ್ರತಿಭಟನೆ
ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ