ಟೊಮೆಟೊಗೆ ದುಬಾರಿ ಬೆಲೆ: ಶೀಘ್ರದಲ್ಲೇ ಕಡಿಮೆಯಾಗುತ್ತಾ ಕೆಂಪು ಹಣ್ಣಿನ ಬೆಲೆ..?

ದೇಶದಲ್ಲಿ ಈಗಾಗಲೇ ಮಾನ್ಸೂನ್ ನಿಂದಾಗಿ ಟೊಮೆಟೊ ದರ ಗಗನಕ್ಕೇರಿದೆ. ಅದರಲ್ಲಿ ಕೆಲವು ಬೃಹತ್ ನಗರಗಳಲ್ಲಿ ಟೊಮೆಟೊ ದರ ಒಂದು ಕೆಜಿಗೆ 250ರವರೆಗೂ ತಲುಪಿದೆ. ದೇಶಾದ್ಯಂತ ಟೊಮೆಟೊದ ಸರಾಸರಿ ದರ 117ರಷ್ಟಿದೆ. ಹೀಗಾಗಿ ಟೊಮೆಟೊ ದರದಿಂದ ಕಂಗೆಟ್ಟಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು 80 ರೂಪಾಯಿಗೆ ಟೊಮೆಟೊ ನೀಡಲು ತಯಾರಾಗಿದೆ.
ದಿಲ್ಲಿ, ನೊಯ್ಡಾ, ಲಕ್ನೋ, ಕಾನ್ಪುರ, ವಾರಾಣಸಿ, ಪಾಟ್ನಾ, ಮುಝಾಫರ್‌ಪುರ್ ಹಾಗೂ ಅರ್ರಾದಂತಹ ಆಯ್ದ ನಗರಗಳಲ್ಲಿ NAFED ಮತ್ತು NCCF ಮೂಲಕ ಕೆಜಿಗೆ 80 ರೂಪಾಯಿ ರಿಯಾಯಿತಿ ದರದಲ್ಲಿ ಟೊಮೆಟೊ ಪೂರೈಸಲು ಕೇಂದ್ರ ಸರ್ಕಾರವು ಮುಂದಾಗಿದೆ.
ದೇಶಾದ್ಯಂತ 500ಕ್ಕೂ ಹೆಚ್ಚು ಮಾರಾಟ ಕೇಂದ್ರಗಳಲ್ಲಿ ಇಂದಿನಿಂದ ಒಂದು ಕೆಜಿ ಟೊಮೆಟೊವನ್ನು 80 ರೂಪಾಯಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. NAFED ಮತ್ತು NCCF ಮೂಲಕ ದಿಲ್ಲಿ, ನೊಯ್ಡಾ, ಲಕ್ನೋ, ಕಾನ್ಪುರ, ವಾರಣಾಸಿ, ಪಾಟ್ನಾ, ಮುಝಾಫರ್‌ಪುರ್ ಹಾಗೂ ಅರ್ರಾದ ಒಂದೊಂದು ಕೇಂದ್ರದಲ್ಲಿ ಮಾರಾಟವನ್ನು ಪ್ರಾರಂಭಿಸಲಾಗಿದೆ. ಮುಂದಿನ ಮಾರುಕಟ್ಟೆ ದರವನ್ನು ಆಧರಿಸಿ ನಾವು ನಾಳೆಯಿಂದ ಇನ್ನೂ ಹೆಚ್ಚು ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತೇವೆ ಎಂದು ಸರ್ಕಾರ ಹೇಳಿಕೆ ನೀಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw