ಗೋವುಗಳ ರಕ್ಷಣೆಗೆ ತಲ್ವಾರ್ ಖರೀದಿಸಿ: ಸಾಧ್ವಿ ಸರಸ್ವತಿ ಕರೆ
ಉಡುಪಿ: ದೇಶದಲ್ಲಿ ಗೋವು ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಟ್ಟಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡುವ ಪರಿಸ್ಥಿತಿ ಇದೆ. ಗೋವುಗಳ ರಕ್ಷಣೆಗೆ ಮನೆಯಲ್ಲಿ ತಲ್ವಾರ್ ಗಳನ್ನು ಖರೀದಿಸಿ ಗೋವು ರಕ್ಷಣೆ ಮಾಡಿ ಎಂದು ಸಾಧ್ವಿ ಸರಸ್ವತಿ ಕರೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್, ಕಂಪ್ಯೂಟರ್ ಖರೀದಿಗೆ 50 ಸಾವಿರ, ಒಂದು ಲಕ್ಷ ಕೊಟ್ಟು ಖರೀದಿಸುವ ನಿಮಗೆ ಒಂದು ಸಾವಿರ ರೂಪಾಯಿ ಕೊಟ್ಟು ತಲ್ವಾರ್ ಖರೀದಿಸುವುದು ಕಷ್ಟವಲ್ಲ ಎಂದರು.
ಕಲ್ಲಿಗೆ ಕಲ್ಲೇ ಉತ್ತರ, ಬಾಣಕ್ಕೆ ಕಾಣವೇ ಉತ್ತರ, ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಳ್ಳಲು ಕಾಲ ಇದಲ್ಲ. ನಾನು ಕೂಡ ಗೋವು ಇರುವ ಮನೆಯಿಂದ ಬಂದವಳು. ಗೋವಿನ ಪಾಲನೆ-ಪೋಷಣೆ ಎಷ್ಟು ಕಷ್ಟ ಎಂದು ಗೊತ್ತಿದೆ ಎಂದು ಸಾಧ್ವಿ ಕರೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನೀರು ಬಿಸಿ ಮಾಡುವ ವೇಳೆ ಹೀಟರ್ ನಿಂದ ಶಾಕ್ ಹೊಡೆದು ಯುವತಿಯ ದಾರುಣ ಸಾವು
ಉಗುಳಿದ್ದನ್ನು ನೆಕ್ಕುವಂತೆ ದಲಿತ ವ್ಯಕ್ತಿಗಳ ಮೇಲೆ ದೌರ್ಜನ್ಯ: ಓರ್ವ ಅರೆಸ್ಟ್
ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಪಾಸ್: ಮಾಜಿ ಸಿಎಂ ಯಡಿಯೂರಪ್ಪ
ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ
ಸ್ನೇಹಿತನ ಚಿನ್ನದಂಗಡಿಯಲ್ಲಿ ಕಳವು ನಡೆಸಲು ಸುಪಾರಿ ನೀಡಿದ ಇನ್ನೊಂದು ಚಿನ್ನದಂಗಡಿ ಮಾಲಿಕ!
ಹಾಸ್ಟೆಲ್ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಭದ್ರತಾ ಸಿಬ್ಬಂದಿ ಅರೆಸ್ಟ್