ಜಿಪಿಎಲ್ ಉತ್ಸವ – 2023: ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಎಂ.ಎಸ್.ಧೋನಿ
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಬಹುನಿರೀಕ್ಷಿತ ಜಿಪಿಎಲ್ ಉತ್ಸವ – 2023 ಇದರ ಆಮಂತ್ರಣ ಪತ್ರಿಕೆಯನ್ನು ಭಾರತೀಯ ಕ್ರಿಕೆಟ್ ತಂಡ ಯಶಸ್ವಿ ನಾಯಕ ಎಂದೇ ಕರೆಸಿಕೊಂಡಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯವರು ಮಂಗಳೂರಿನಲ್ಲಿ ಶನಿವಾರ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕರೂ, ಜಿಪಿಎಲ್ ಉತ್ಸವದ ಪ್ರಮುಖರೂ ಆದ ವೇದವ್ಯಾಸ ಕಾಮತ್ ಅವರು ಫೆಬ್ರವರಿ 10, 11, 12 ರಂದು ಅಡ್ಯಾರ್ ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಚ್ಚಹಸುರಿನ ಸುಂದರ ಕ್ರೀಡಾಂಗಣದಲ್ಲಿ ನಡೆಯುವ ಜಿಪಿಎಲ್ ಉತ್ಸವಕ್ಕೆ ಧೋನಿಯವರನ್ನು ಆಮಂತ್ರಿಸಿದರು. ಜಿಪಿಎಲ್ ಟ್ರೋಫಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಧೋನಿಯವರು ಭಾಗವಹಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ವೇದವ್ಯಾಸ ಕಾಮತ್ ಅವರೊಂದಿಗೆ ಜಿಪಿಎಲ್ ಉತ್ಸವದ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಚಾಡಿ ಗುರುಪ್ರಸಾದ್ ಕಾಮತ್, ಕಾನೆಂಗಾಡ್ ಗುರುಪ್ರಸಾದ್ ಕಾಮತ್ ಉಪಸ್ಥಿತರಿದ್ದರು.
7 ನೇ ವರ್ಷದ ಜಿಪಿಎಲ್ ಉತ್ಸವ- 2023 ಈ ಬಾರಿಯೂ ವಿಶೇಷ ಹಬ್ಬದಂತೆ ಆಯೋಜಿಸಲಾಗುತ್ತಿದ್ದು, ಕ್ರಿಕೆಟ್ ಪಂದ್ಯಾಟಗಳೊಂದಿಗೆ ಹೆಲಿಕಾಪ್ಟರ್ ರೌಂಡ್, ಬೋಟಿಂಗ್, ಕಿಡ್ಸ್ ಝೋನ್, ಮೂರು ಮುತ್ತು ತಂಡದಿಂದ ನಾಟಕ ಪ್ರದರ್ಶನ, ಬೊಂಬೆಯಾಟ, ವಾಯ್ಸ್ ಆಫ್ ಜಿಎಸ್ ಬಿ ಅಡಿಶನ್, ವೆರೈಟಿ ಎಂಟರ್ ಟೇನ್ ಮೆಂಟ್, ಫುಡ್ ಕೋರ್ಟ್ ಸಹಿತ ಹಲವಾರು ಆಕರ್ಷಣೆಗಳನ್ನು ಒಳಗೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw