ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ SBI - Mahanayaka
3:26 PM Wednesday 5 - February 2025

ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ SBI

sbi
18/04/2021

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾಸಿಕ ಇಎಂಐ ಆಯ್ಕೆಯನ್ನು ನೀಡುತ್ತಿದೆ. ಎಸ್‌ ಬಿಐ ಕಾರ್ಡ್ ಡಾಟ್‌ ಕಾಂನ ಪ್ರಕಾರ ಕಂತು 6 ತಿಂಗಳಿಂದ ಪ್ರಾರಂಭವಾಗಿ 24 ತಿಂಗಳಲ್ಲಿ ಕೊನೆಗೊಳ್ಳಲಿದೆ.

ಇಎಂಐ ವಿವರಗಳ ಪ್ರಕಾರ 6 ತಿಂಗಳವರೆಗಾದರೆ ಗ್ರಾಹಕರು 1,000 ರೂ. ಖರೀದಿಗೆ ಮಾಸಿಕ ಮರುಪಾವತಿ ಕಂತು 177.5 ರೂ., 12 ತಿಂಗಳ ಅವಧಿಯದ್ದಾದರೆ ಇಎಂಐ 93.5 ರೂ. ಬರಲಿದೆ. 500 ರೂ. ಖರೀದಿಯನ್ನು ಫ್ಲೆಕ್ಸಿ ಪೇ ಮಾಡಿದರೆ ಮಾಸಿಕ‌ ಕಂತು 52 ರೂ. ಬರಲಿದೆ. ಗ್ರಾಹಕರು ವಹಿವಾಟು ನಡೆಸಿದ 30 ದಿನಗಳಲ್ಲಿ ತಮ್ಮ ಖರೀದಿಯನ್ನು ಫ್ಲೆಕ್ಸಿಪೇ ಆಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

ಫ್ಲೆಕ್ಸಿಪೇ ಎಂಬುದು ತಮ್ಮ ದೊಡ್ಡ ಖರೀದಿಗಳನ್ನು ಸುಲಭ ಮಾಸಿಕ ಕಂತುಗಳಾಗಿ ಪರಿವರ್ತಿಸಲು ನೀಡುವ ಸೌಲಭ್ಯವಾಗಿದೆ. ಯಾವುದೇ ಎಸ್‌ಬಿಐ ಕಾರ್ಡ್‌ಹೋಲ್ಡರ್ 500 ರೂ.ಕ್ಕಿಂತ ಹೆಚ್ಚಿನ ವಹಿವಾಟು ಮಾಡಿದ್ದರೆ ಆ ವಹಿವಾಟನ್ನು 30 ದಿನಗಳಲ್ಲಿ ಫ್ಲೆಕ್ಸಿಪೇ ಆಗಿ ಪರಿವರ್ತಿಸಬಹುದು ಎಂದು ಎಸ್‌ಬಿಐ ಹೇಳಿಕೊಂಡಿದೆ.

ಇತ್ತೀಚಿನ ಸುದ್ದಿ