ಹುಡುಗಿಯರಿಗೆ ಉಚಿತ ಬ್ಯೂಟಿ ಪಾರ್ಲರ್, ಹಿರಿಯರಿಗೆ ತಂಬಾಕು, ಬೀಡಿ ಫ್ರೀ: ಗ್ರಾಪಂ ಅಭ್ಯರ್ಥಿಯ ಪ್ರಣಾಳಿಕೆ!
ಪಾಟ್ನಾ: ಚುನಾವಣಾ ಪ್ರಣಾಳಿಕೆ ಎಂದರೆ, ಸುಳ್ಳುಗಳ ಸರಮಾಲೆ ಎಂದೇ ಪ್ರಸ್ತುತ ಜನರು ಭಾವಿಸುತ್ತಿದ್ದಾರೆ. ಬಹುತೇಕ ಬಾರಿ ಇದು ಸತ್ಯ ಕೂಡ ಆಗಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಚಿತ್ರವಿಚಿತ್ರ ಪ್ರಣಾಳಿಕೆಗಳನ್ನು ಘೋಷಿಸಿದ ಬಳಿಕ ಜನರನ್ನು ನಡುನೀರಿನಲ್ಲಿ ಬಿಡುವುದು ಇದೀಗ ಸರ್ವೇ ಸಾಮಾನ್ಯ ಎಂಬಂತಾಗಿದೆ. ಈ ನಡುವೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೋರ್ವ ಬಿಡುಗಡೆ ಮಾಡಿರುವ ಪ್ರಣಾಳಿಕೆ ಇದೀಗ ಭಾರೀ ಸುದ್ದಿಯಲ್ಲಿದೆ.
ಬಿಹಾರದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿದ್ದು, ಹೀಗಾಗಿ ಇಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಪೈಕಿ ಮುಝಾಫರ್ ಪುರ ತುಫೈಲ್ ಅಹ್ಮದ್ ಎಂಬವರು ವಿಭಿನ್ನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪೋಸ್ಟರ್ ಕಂಡ ಗ್ರಾಮಸ್ಥರು ಅಚ್ಚರಿಯಲ್ಲಿ ಮೂಗು ಕೆರೆದುಕೊಳ್ಳುವಂತಾಗಿದೆ!
ತುಫೈನ್ ಅಹ್ಮದ್ ಅವರ ಘೋಷ ವಾಕ್ಯ ಹೀಗಿದೆ: “ನೀವು ನಮ್ಮ ಮೇಲೆ ನಂಬಿಕೆ ಇಡಿ, ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುತ್ತಾರೆ” ಮುಂದುವರಿದು, ತುಫೈಲ್ ಅಹ್ಮದ್ ಗ್ರಾಮ ಪಂಚಾಯತ್ ಅಧ್ಯಕ್ಷನಾದ ಕೂಡಲೇ ಹಳ್ಳಿಯ ಎಲ್ಲ ಜನರಿಗೆ ಸರ್ಕಾರಿ ಉದ್ಯೋಗ ನೀಡುತ್ತೇವೆ. ಹೆಣ್ಣು ಮಕ್ಕಳಿಗೆ ಉಚಿತ ಬ್ಯೂಟಿ ಪಾರ್ಲರ್, ಗಂಡು ಮಕ್ಕಳಿಗೆ ಅಪಾಚೆ ಬೈಕ್, ಗ್ರಾಮದಲ್ಲಿ ವಿಮಾನ ನಿಲ್ದಾಣ ಸೌಲಭ್ಯ, ಹಿರಿಯರಿಗೆ ಉಚಿತ ತಂಬಾಕು ಮತ್ತು ಬೀಡಿ. ಟ್ಯಾಪ್ ವಾಟರ್ ಯೋಜನೆಯಂತೆಯೇ ಟ್ಯಾಪ್ ಮಿಲ್ಕ್ ಯೋಜನೆ ತರುವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ.
ಇನ್ನೂ ಈ ಪೋಸ್ಟರ್ ಬಗ್ಗೆ ಸ್ವತಃ ತುಫೈಲ್ ಅಹ್ಮದ್ ಅವರನ್ನೇ ಮಾಧ್ಯಮಗಳು ಪ್ರಶ್ನಿಸಿದ್ದು, ಈ ವೇಳೆ, ನಾನು ಇಂತಹ ಯಾವುದೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲ. ಯಾರೋ ತಮಾಷೆಗಾಗಿ ಈ ರೀತಿ ಮಾಡಿರಬಹುದು ಎಂದು ತುಫೈಲ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು !
ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಖಾಸಗಿ ಅಂಗಕ್ಕೆ ರಾಡ್ ನುಗ್ಗಿಸಿದ ದುಷ್ಟರು: ಮಹಿಳೆಯ ಸ್ಥಿತಿ ಚಿಂತಾಜನಕ
ನಾನು ಕಾಶ್ಮೀರ್ ಪಂಡಿತ್, ನನ್ನ ಕುಟುಂಬ ಕಾಶ್ಮೀರ್ ಪಂಡಿತ್ | ರಾಹುಲ್ ಗಾಂಧಿ
ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?
ಮೊದಲು ಕಾಂಗ್ರೆಸ್ ನ್ನು ತೊಡೆದು ಹಾಕಬೇಕು | ನಟ ಅಹಿಂಸಾ ಚೇತನ್
ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿ: 6 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ
ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು