ಕೆಜಿಎಫ್ ಖ್ಯಾತಿಯ ತಾತ ಇನ್ನಿಲ್ಲ: ಕೃಷ್ಣ ಜಿ. ರಾವ್ ನಿಧನ
ದಾಖಲೆ ಬರೆದ KGF ಚಿತ್ರದಲ್ಲಿ ಪ್ರಮುಖ ಆಕರ್ಷಣಿಯ ಪಾತ್ರವಾಗಿದ್ದ ತಾತನ ಪಾತ್ರ ಮಾಡಿದ್ದ ಕೃಷ್ಣ ಜಿ. ರಾವ್ ಅವರು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಐದು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ಬಳಿಕವೂ ಚಿಕಿತ್ಸೆಗೆ ಸ್ಪಂದಿಸದ ಅವರು ನಿಧನರಾಗಿದ್ದಾರೆ.
ಕೆಜಿಎಫ್ ಚಾಫ್ಟರ್ 1ರಲ್ಲಿ ಸಣ್ಣ ಪಾತ್ರವಾಗಿದ್ದರೂ ಪ್ರಮುಖ ಆಕರ್ಷಣಿಯ ಪಾತ್ರದಲ್ಲಿ ಕೃಷ್ಣ ಅವರು ನಟಿಸಿದ್ದರು. ಕೆಜಿಎಫ್ 2ನಲ್ಲಿ ಕೂಡ ಅವರ ಡೈಲಾಗ್ ಫೇಮಸ್ ಆಗಿತ್ತು. ಶಂಕರ್ ನಾಗ್ ಕಾಲದಿಂದಲೇ ಇವರು ನಟನೆಗೆ ಕಾಲಿಟ್ಟಿದ್ದರು. ಕೆಜಿಎಫ್ ಚಿತ್ರದಲ್ಲಿ ಇವರು ಸಿನಿಪ್ರಿಯರಿಗೆ ಚಿರಪರಿಚಿತರಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka