ವರನಿಗೆ ಪ್ರಧಾನಮಂತ್ರಿ ಹೆಸರು ಗೊತ್ತಿಲ್ಲದ್ದಕ್ಕೆ ಮದುವೆ ಮುರಿದ ವಧು..!
ಇದೊಂದು ವಿಚಿತ್ರದಲ್ಲಿ ವಿಚಿತ್ರ. ಮದುವೆ ಅಂದರೆ ಒಂದು ಸಂಭ್ರಮ. ಆದರೆ ಇಲ್ಲೊಂದು ವಿಚಿತ್ರ ನಡೆಯಿತು.
ಹೌದು…
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮದ ನಂತರ ವರನಿಗೆ ದೇಶದ ಪ್ರಧಾನಿ ಯಾರು ಎಂದು ಉತ್ತರಿಸುವಂತೆ ವಧು ಪ್ರಶ್ನೆ ಕೇಳಿದ್ದಾಳೆ.
ಆದರೆ ವರನಿಗೆ ದೇಶದ ಪ್ರಧಾನ ಮಂತ್ರಿ ಯಾರೆಂಬ ಮಾಹಿತಿ ಇರದ ಕಾರಣ ಆತ ಉತ್ತರಿಸಲು ಪರದಾಡಿದ್ದಾನೆ. ನನ್ನ ಪ್ರಶ್ನೆಗೆ ಉತ್ತರ ಹೇಳಲಾಗದ ಕಾರಣ ವಧು ತನ್ನ ಮದುವೆಯನ್ನು ರದ್ದುಪಡಿಸಿದ್ದಾಳೆ. ಅಲ್ಲದೇ ಆಕೆ ತಕ್ಷಣವೇ ಅಲ್ಲೇ ಇದ್ದ ವರನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ.
ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಸೀರಪುರ ಗ್ರಾಮದ ರಾಮ ಅವತಾರ ಎಂಬುವವರ ಪುತ್ರ ಶಿವಶಂಕರ್ (27) ಹಾಗೂ ಕರಂದ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇಡು ರಾಮ್ ಅವರ ಪುತ್ರಿ ರಂಜನಾ ಅವರೊಂದಿಗೆ ಇತ್ತೀಚಿಗೆ ವಿವಾಹ ನೆರವೇರಿತು.
ಮದುವೆಯ ನಂತರ ವಧುವಿನ ಮನೆಯಲ್ಲಿ ಜೂನ್ 12 ರಂದು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಮಾರಂಭದಲ್ಲಿ ಶಿವಶಂಕರ್ ಅವರಿಗೆ ಪತ್ನಿ ರಂಜನಾ ಮತ್ತು ಆಕೆಯ ಸೋದರ ಮಾವ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕೆಲವು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಭಾಗವಾಗಿ ಪತ್ನಿ ರಂಜನಾ ದೇಶದ ಪ್ರಧಾನಿಯ ಹೆಸರು ಹೇಳುವಂತೆ ಶಿವಶಂಕರ್ ಗೆ ಕೇಳಿದ್ದಾರೆ . ಆದರೆ ಶಿವಶಂಕರ್ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ, ವಧುವಿನ ಸಂಬಂಧಿಕರು ಅವನನ್ನು ಅಪಹಾಸ್ಯ ಮಾಡಿದ್ದಾರೆ. ಮತ್ತು ಅವನನ್ನು ದಡ್ಡ ಎಂದು ಪರಿಗಣಿಸಿದ್ದಾರೆ.
ಇದು ಅವಮಾನಕರ ಸಂಗತಿ ಎಂದು ಬಗೆದ ವಧು ರಂಜನಾ ಶಿವಶಂಕರ್ ಜೊತೆಗಿನ ಮದುವೆಯನ್ನು ರದ್ದುಗೊಳಿಸಿ, ಆತನ ಕಿರಿಯ ಸಹೋದರ ಅನಂತ್ ಅವರನ್ನು ಆ ಸ್ಥಳದಲ್ಲೇ ವಿವಾಹವಾಗಿದ್ದಾಳೆ. ಇನ್ನು ಶಿವಶಂಕರ್ ಜೊತೆ ಬಂದಿದ್ದ ಚಿಕ್ಕಪ್ಪ ರಾಮ್ ಅವತಾರ್ ಅವರು ತಮ್ಮಸೊಸೆ ಕಿರಿಯನಾದ ಅನಂತನನ್ನು ಮದುವೆಯಾಗುವುದನ್ನು ವಿರೋಧಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw