ಅರಿಶಿಣ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ
11/12/2024
ಚಾಮರಾಜನಗರ: ಅರಿಶಿಣ ಬೆಳೆಯ ನಡುವೆ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಕೆಂಪನಟ್ಟಿ ಗ್ರಾಮದ ಮಾರ(68) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಕುರಟ್ಟಿ ಹೊಸೂರು ಸಮೀಪ ಅರಿಶಿಣ ಫಸಲಿನ ನಡುವೆ ಈತ ಗಾಂಜಾ ಬೆಳೆದಿರುವ ಖಚಿತ ಮಾಹಿತಿಯ ಮೇರೆಗೆ ರಾಮಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಈತನಿಂದ 211 ಕೆ.ಜಿ. ತೂಕದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಈತನಿಗೆ ಸಹಕಾರ ನೀಡಿದ್ದ ಮಾದೇವ ಎಂಬಾತನನ್ನೂ ಆರೋಪಿ ಎಂದು ಪರಿಗಣಿಸುವಂತೆ ಎಸ್ ಪಿ ಡಾ.ಬಿ.ಟಿ ಕವಿತಾ ಸೂಚನೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97