ಡ್ರೈವರ್ ಸೀಟ್ ಬಳಿಯಿಂದ ಬಸ್ ಹತ್ತಿದ ಗೃಹಲಕ್ಷ್ಮೀ: ಬಸ್ ಫುಲ್ ರಷ್

ಚಿಕ್ಕಮಗಳೂರು: ಮಹಿಳೆಯರಿಗೆ ಬಸ್ ಪ್ರಯಾಣ ಫ್ರೀ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಮಹಿಳೆಯರ ಓಡಾಟ ಹೆಚ್ಚಳವಾಗಿದೆ. ಶೃಂಗೇರಿ ದೇವಸ್ಥಾನಕ್ಕೆ ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚಳವಾಗಿದೆ. ಇದೀಗ ಬಸ್ಸಿನಲ್ಲಿ ಫುಲ್ ರಷ್ ಆದ ಪರಿಣಾಮ ಮಹಿಳೆಯೊಬ್ಬರು ಡ್ರೈವರ್ ಸೀಟ್ ಬಳಿಯಿಂದ ಬಸ್ ಹತ್ತಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶೃಂಗೇರಿ ಬಸ್ ನಿಲ್ದಾಣದಲ್ಲಿ ಗೃಹ ಲಕ್ಷ್ಮಿಯೊಬ್ಬರು ತನ್ನ ಮಕ್ಕಳನ್ನು ಡ್ರೈವರ್ ಸೀಟ್ ಬಳಿಯಿಂದ ಹತ್ತಿಸಿ, ತಾನೂ ಅಲ್ಲಿಂದಲೇ ಬಸ್ ಹತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ಮಹಿಳೆಯರೇ ತುಂಬಿದ್ದು, ಬಸ್ ನಿಲ್ದಾಣಕ್ಕೆ ಬಂದು ಕೆಲವೇ ಕ್ಷಣಗಳಲ್ಲಿ ತುಂಬಿ ತುಳುಕುತ್ತಿದೆ. ಹೀಗಾಗಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಬಸ್ ಗಳು ಸಿಗದೆ ಪರದಾಡುತ್ತಿರುವ ಘಟನೆಗಳು ಕೂಡ ನಡೆಯುತ್ತಿವೆ.
ಇನ್ನೊಂದೆಡೆ ಕಂಡೆಕ್ಟರ್ ಗಳು ಪುರುಷ ಪ್ರಯಾಣಿಕರಿಗೆ ಚಿಲ್ಲರೆ ಕೊಡಲು ಪರದಾಡುತ್ತಿದ್ದು, ಹೆಚ್ಚಿನ ಸೀಟುಗಳು ಫ್ರೀ ಸೀಟ್ ಗಳಾಗಿರುತ್ತವೆ. ಇತ್ತ ಪುರುಷ ಪ್ರಯಾಣಿಕರು ಐನೂರು, ಇನ್ನೂರು ರೂಪಾಯಿ ನೋಟುಗಳನ್ನು ನೀಡಿದರೆ, ಚಿಲ್ಲರೆ ಕೊಡುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಒಟ್ಟಿನಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣ ಆರಂಭಿಕ ಹಂತದಲ್ಲಿ ಒಂದಷ್ಟು ಅನಾನುಕೂಲತೆಗಳನ್ನು ಸೃಷ್ಟಿಸಿದರೂ, ಈ ಯೋಜನೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw