ಶೂ ಧರಿಸುವ ವೇಳೆ ಸಪೋರ್ಟ್ ಗೆ ಗಾಂಧೀಜಿ ಫೋಟೋ ಹಿಡಿದುಕೊಂಡ ಗೃಹ ಸಚಿವರು!
ತುಮಕೂರು: ಸ್ವಾತಂತ್ರ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಂದ ಅಚಾತುರ್ಯವೊಂದು ನಡೆದು ಹೋಗಿದ್ದು, ಗಾಂಧೀಜಿಯ ಫೋಟೋವನ್ನು ಹಿಡಿದುಕೊಂಡು ಸಚಿವರು ಶೂ ಧರಿಸಿ ವಿವಾದಕ್ಕೀಡಾಗಿದ್ದಾರೆ.
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಧ್ವಜಾರೋಹಣದ ವೇಳೆ ಶೂ ಬಿಚ್ಚಿಟ್ಟಿದ್ದ ಅರಗ ಜ್ಞಾನೇಂದ್ರ ಅವರು, ಧ್ವಜಾರೋಹಣದ ಬಳಿಕ ಗಾಂಧಿ ಫೋಟೋಗೆ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ ಶೂಧರಿಸಲು ಮುಂದಾಗಿದ್ದು, ಈ ವೇಳೆ ಗಾಂಧೀಜಿ ಫೋಟೋವನ್ನು ಸಪೋರ್ಟ್ ಗೆ ಹಿಡಿದುಕೊಂಡಿದ್ದಾರೆ.
ಈ ವಿಡಿಯೋ ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ವಿಡಿಯೋ ಪ್ರಸಾರವಾಗುತ್ತಿದ್ದಂತೆಯೇ, ಗಾಂಧೀಜಿ ಫೋಟೋಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka