ರಾತ್ರಿಯಾದರೆ ಇಲ್ಲಿ ನೀರಿನಿಂದ ಮೇಲಕ್ಕೆ ಬರುತ್ತವೆ ರಾಶಿ ರಾಶಿ ಮೀನುಗಳು: ಏನಿದರ ರಹಸ್ಯ?

grunion runs
21/04/2022

ಪ್ರಕೃತಿಯ ವೈಶಿಷ್ಠ್ಯ ಅನ್ನೋದು ಬಹಳ ವಿಚಿತ್ರ. ಇಲ್ಲಿನ ಜೀವ ವೈವಿಧ್ಯಗಳು ನಮ್ಮನ್ನು ಅಚ್ಚರಿಗೊಳಪಡಿಸುತ್ತವೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ರಾತ್ರಿ ವೇಳೆ ಸಣ್ಣ ಸಣ್ಣ ಮೀನುಗಳು ವಿಚಿತ್ರ ವರ್ತನೆಯನ್ನು ತೋರುತ್ತದೆ.  ಅದೇನು ಎನ್ನುವುದನ್ನು ತಿಳಿದರೆ ಖಂಡಿತವಾಗಿಯೂ ನೀವು ಅಚ್ಚರಿಪಡುತ್ತೀರಿ.

ಸಾಮಾನ್ಯವಾಗಿ ಮೀನುಗಳು ನೀರಿನಲ್ಲಿರಲು ಬಯಸುತ್ತವೆ. ನೀರಿನಿಂದ ಮೇಲೆ ಬಂದರೆ ಮೀನುಗಳ ಉಸಿರುಗಟ್ಟಿ ಸತ್ತು ಹೋಗುತ್ತವೆ. ಆದರೆ, ದಕ್ಷಿಣ ಕ್ಯಾಲಿಪೋರ್ನಿಯಾದ ಕಡಲ ತೀರದಲ್ಲಿ ಸಣ್ಣ ಗಾತ್ರದ ಮೀನುಗಳು ರಾತ್ರಿ ವೇಳೆ ಸಮುದ್ರದ ನೀರಿನಿಂದ ಮರಳಿನ ಮೇಲೆ ಬರುತ್ತವೆ. ನೀರಿನ ಅಲೆಗಳು ಮೀನನ್ನು ದಡದಿಂದ ಒಳಗೆ ಎಳೆದುಕೊಂಡು ಹೋದರೂ, ಆ ಮೀನುಗಳು ಮರಳಿನ ಮೇಲೆ ಹರಸಾಹಸ ಪಟ್ಟಾದರೂ ಬರುತ್ತವೆ.

ರಾತ್ರಿ 11 ಗಂಟೆಯಿಂದ 1 ಗಂಟೆಯವರೆಗೆ ಮೀನುಗಳು ಈ ವಿಚಿತ್ರ ವರ್ತನೆಯನ್ನು ತೋರುತ್ತವೆ. ಇಲ್ಲಿನ ದೋಹೆನಿ ಬೀಚ್ ನಲ್ಲಿ  ಚಿತ್ರೀಕರಿಸಿರುವ ವಿಡಿಯೋದಲ್ಲಿ ಮೀನುಗಳು ನೀರಿನಿಂದ ಮೇಲಕ್ಕೆ ಬರುತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.

ಮೀನುಗಳ ಈ ವರ್ತನೆಯನ್ನು ಗ್ರುನಿಯನ್ ರನ್(Grunion runs )ಎಂದು ಕರೆಯಲಾಗುತ್ತದೆ. ಈ ಮೀನುಗಳು ಮೊಟ್ಟೆ ಇಡಲು ನೀರನ್ನು ಬಿಟ್ಟು ಮೇಲೆ ಬರುತ್ತವೆ.  ಇಂತಹ ಸಂದರ್ಭದಲ್ಲಿ ಸಮುದ್ರದ ಬದಿಯಲ್ಲಿ ರಾಶಿ ರಾಶಿ ಮೀನುಗಳು ಕಂಡು ಬರುತ್ತವೆ. ಈ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಲ್ಲು ಸಕ್ಕರೆ ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳು ಮಾಯ!

ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಪರಾರಿ

ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರು ಇಡಲು ನಿರ್ಧಾರ: ಸಿಎಂ ಬೊಮ್ಮಾಯಿ

ಆಟವಾಡುತ್ತಿದ್ದ ಬಾಲಕನಿಗೆ ಟಿಪ್ಪರ್ ಡಿಕ್ಕಿ: ಬಾಲಕನ ದಾರುಣ ಸಾವು

ಇತ್ತೀಚಿನ ಸುದ್ದಿ

Exit mobile version