ಆನ್ ಲೈನ್ ಕ್ಲಾಸ್ ನ ಗ್ರೂಪ್ ಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ! - Mahanayaka
5:27 AM Tuesday 10 - December 2024

ಆನ್ ಲೈನ್ ಕ್ಲಾಸ್ ನ ಗ್ರೂಪ್ ಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ!

mobile video
20/12/2021

ಚೆನ್ನೈ: ಆನ್ ಲೈನ್ ಶಿಕ್ಷಣದ ಸಂದರ್ಭದಲ್ಲಿ ಶಾಲಾ ಗ್ರೂಪ್ ಗಳಲ್ಲಿ ನಡೆಯುತ್ತಿರುವ ಯಡವಟ್ಟುಗಳು ಒಂದೆರಡಲ್ಲ. ಇಲ್ಲೊಬ್ಬ ಶಿಕ್ಷಕ ಆನ್ ಲೈನ್ ಕ್ಲಾಸ್ ಗಾಗಿ ಕ್ರಿಯೇಟ್ ಮಾಡಲಾಗಿರುವ ಗ್ರೂಪ್ ನಲ್ಲಿ ಅಶ್ಲೀಲ ವಿಡಿಯೋ ಶೇರ್ ಮಾಡಿದ ಘಟನೆ  ಚೆನ್ನೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಣಿತ ಶಿಕ್ಷಕ ಮತಿವಣ್ಣನ್ ಅವರ ಮತಿಗೆಟ್ಟ ವರ್ತನೆಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮುಜುಗರಕ್ಕೀಡಾಗುವಂತಾಗಿದೆ. ಶುಕ್ರವಾರ ರಾತ್ರಿ ವೇಳೆ ಶಿಕ್ಷಕ ಮತಿವಣ್ಣನ್ ಅಶ್ಲೀಲ ವಿಡಿಯೋವನ್ನು ಶಾಲಾ ಗ್ರೂಪ್ ಗೆ  ಶೇರ್ ಮಾಡಿದ್ದು, ಈ ವಿಡಿಯೋವನ್ನು ಕಂಡ ತಕ್ಷಣವೇ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಶಾಲಾ ಆಂತರಿಕ ಮಂಡಳಿ ಶಿಕ್ಷಕನನ್ನು ಕರೆದು ವಿಚಾರಣೆ ನಡೆಸಿದಾಗ, ಶುಕ್ರವಾರ ರಾತ್ರಿ ಮದ್ಯಪಾನ ಮಾಡಿದ್ದೆ. ಹೀಗಾಗಿ ನಾನೇನು ಮಾಡಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಪೋಕ್ಸೋ ಹಾಗೂ ಐಟಿ ಕಾಯ್ದೆಯಡಿಯಲ್ಲಿ  ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಳಗಾವಿ ಸುವರ್ಣಸೌಧ ಮುತ್ತಿಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟಿಗ ರಿಷಬ್ ಪಂತ್

ಮೈಸೂರು: ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದ ಪೌರಕಾರ್ಮಿಕ ಸಾವು

ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣು

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ: ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಗೆ ಇಡಿ ಸಮನ್ಸ್

ಇತ್ತೀಚಿನ ಸುದ್ದಿ