ಜಿ.ಟಿ.ದೇವೇಗೌಡರು ನನ್ನ ತಂದೆ ಸಮಾನ | ಸಂಸದ ಪ್ರತಾಪ್ ಸಿಂಹ - Mahanayaka

ಜಿ.ಟಿ.ದೇವೇಗೌಡರು ನನ್ನ ತಂದೆ ಸಮಾನ | ಸಂಸದ ಪ್ರತಾಪ್ ಸಿಂಹ

prathap simha
28/05/2021

ಮೈಸೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡಿಸೋದೇ ತಾಕತ್ತು ಎನ್ನುವುದಾದರೆ, ಅಂತಹ ತಾಕತ್ತೇ ನನಗೆ ಬೇಡ ಎಂದು ಸಂಸದ ಪ್ರತಾಪ್ ಸಿಂಹ, ಜಿ.ಟಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಸಂಸದನಾಗಿ ನನ್ನ ತಾಕತ್ತು ತೋರಿಸಿದ್ದೇನೆ. ಅದಕ್ಕೆ ಜನರು ಉತ್ತರ ನೀಡಿದ್ದಾರೆ.  ನಾನು ಮೈಸೂರಿನಿಂದ ಹೊರಗಿನ ವ್ಯಕ್ತಿಯಾಗಿದ್ದರೂ ನನ್ನನ್ನು ಜನರು ಗೆಲ್ಲಿಸಿದ್ದಾರೆ. ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಸಹಜ. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಈ ಸಣ್ಣ ಕೆಲಸವನ್ನು ನಾನು ಎಂದಿಗೂ ಮಾಡಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಜಿ.ಟಿ.ದೇವೇಗೌಡರು ನನ್ನ ತಂದೆ ಸಮಾನ. ಅವರ ಪುತ್ರ ಹರೀಶ್ ಗೌಡನನ್ನು ಕಂಡಂತೆ ನನ್ನನ್ನು ಕಾಣುತ್ತಿದ್ದಾರೆ. ರಾಜಕೀಯದಲ್ಲಿ ಬೈಯ್ಯುವ ಹಕ್ಕು ಅವರಿಗಿದೆ. ಅದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ.  ಸಾ.ರಾ.ಮಹೇಶ್ ಅವರು ಒಳ್ಳೆಯ ಕೆಲಸ  ಮಾಡಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಗೌಡರು ಗರಂ ಆಗಿರಬಹುದು ಎಂದು ಹೇಳಿದರು.

ಇತ್ತೀಚಿನ ಸುದ್ದಿ