ಗ್ಯಾರಂಟಿ ಯೋಜನೆ: ಸಿಎಂ ಮಾತು ಒಂದು, ಸಚಿವರ ಮಾತು ಮತ್ತೊಂದು: ಸಚಿವ ಕೆ.ವೆಂಕಟೇಶ್
ಚಾಮರಾಜನಗರ: ಗೃಹಜ್ಯೋತಿ ಯೋಜನೆಯ ಗೊಂದಲ ಇನ್ನೂ ಮುಂದುವರೆದಿದ್ದು ಸಿಎಂ ಸಿದ್ದರಾಮಯ್ಯ ಒಂದು ರೀತಿ ಹೇಳಿಕೆ ಕೊಟ್ಟರೇ ಸಚಿವ ಕೆ.ವೆಂಕಟೇಶ್ ಮತ್ತೊಂದು ರೀತಿ ಹೇಳಿಕೆ ಕೊಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆ ಬಳಿಕ ಮಾಧ್ಯಮದವರೊಟ್ಟಿಗೆ ಸಚಿವರು ಮಾತನಾಡಿ, ನಾವು ಪ್ರಣಾಳಿಕೆಯಲ್ಲಿ ತಿಳಿಸಿದ ರೀತಿ ಮನೆ ಮಾಲೀಕರು ಇದರ ಯೋಜನೆ ಪಡೆಯುತ್ತಾರೆ, ಬಾಡಿಗೆದಾರನಲ್ಲ, ವಿದ್ಯುಶಕ್ತಿಯ ಗ್ರಾಹಕ ಯಾರಾಗಿರುವನೋ, ಯಾರ ಹೆಸರಿನಲ್ಲಿರುವೋದೋ ಅವರು ಇದರ ಫಲಾನುಭವಿಯಾಗುತ್ತಾರೆ ಎಂದಿದ್ದಾರೆ.
ಇಂದು ಬೆಳಗ್ಗೆ ಬಾಡಿಗೆದಾರರು ಇದರ ಯೋಜನೆ ಪಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರದೇ ಸಂಪುಟದ ಸಚಿವ ಮನೆ ಮಾಲೀಕರಿಗಷ್ಟೇ ಯೋಜನೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆ ಜಾರಿಯಲ್ಲಿನ ಗೊಂದಲ ಜಗಜ್ಜಾಗಿರಾಗಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹೊಂದಾಣಿಕೆ ಇಲ್ಲ ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ, ಬಿಜೆಪಿಯವರು ಸುಖಾಸುಮ್ಮನೆ ವಿಚಾರಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಹಸುಗಳನ್ನು ಏಕೆ ಕಡಿಬಾರದು ಎಂಬ ಹೇಳಿಕೆ ವಿವಾದ ಆಗುತ್ತಿರುವ ಬಗ್ಗೆ ಮಾತನಾಡಿ, ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟಿದ್ದಾರೆ, ಕಾಯ್ದೆ ಬಗ್ಗೆಯೂ ಹೇಳಿದ್ದಾರೆ, ಕಾಯ್ದೆ ಬಗ್ಗೆ ಪರಾಮರ್ಶಿಸುವುದಾಗಿಯೂ ಹೇಳಿದ್ದಾರೆ ಅವರು ಪ್ರತಿಕ್ರಿಯೆ ಕೊಟ್ಟಿರುವುದರಿಂದ ನಾನೇನು ಮಾತನಾಡಲ್ಲ ಎಂದು ಜಾರಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw