ಕ್ವಾರಿಯಲ್ಲಿ ಗುಡ್ಡ ಕುಸಿತ: 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದ ಕಾರ್ಮಿಕ - Mahanayaka
3:36 AM Wednesday 11 - December 2024

ಕ್ವಾರಿಯಲ್ಲಿ ಗುಡ್ಡ ಕುಸಿತ: 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದ ಕಾರ್ಮಿಕ

gudda kusitha
06/03/2022

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯ ಗುಡ್ಡ ಕುಸಿತದಲ್ಲಿ ಮಣ್ಣು, ಬಂಡೆಗಳ ಅಡಿ ಸಿಲುಕಿರುವ ಮೂವರು ಕಾರ್ಮಿಕರ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಹೊರ ತೆರೆಯಲಾಗಿದೆ.

ಎನ್‍ಡಿಆರ್‌ಎಫ್ ಪಡೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಈವರೆಗೂ ಒಬ್ಬರ ಶವ ಹೊರ ತೆಗೆದಿದ್ದಾರೆ. ಅಲ್ಲದೆ, ನಿನ್ನೆ ಬಂಡೆಯಡಿ 4 ಗಂಟೆಗೂ ಹೆಚ್ಚು ಕಾಲ ಸಿಲುಕಿ ಬದುಕುಳಿದಿದ್ದ ಕಾರ್ಮಿಕ ನೂರುದ್ದೀನ್‌ ಎಂಬವರನ್ನು ಹೊರತೆಗೆದಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.

ಬೃಹತ್ ಕಲ್ಲುಗಳ ಅಡಿ ಇನ್ನೂ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆದರೆ ನಿನ್ನೆ ಗುಡ್ಡ ಕುಸಿತ ವೇಳೆ 20ಕ್ಕೂ ಹೆಚ್ಚು ಕಾರ್ಮಿಕರಿದ್ದರು ಅಂತ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ.‌

ಗಣಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ, ಉಪಗುತ್ತಿಗೆ ಪಡೆದಿದ್ದ ಹಕೀಂ, ಗಣಿ ನೋಡಿಕೊಳ್ಳುತ್ತಿದ್ದ ನವೀದ್ ವಿರುದ್ಧ ಗಣಿ, ಭೂ ವಿಜ್ಞಾನ ಇಲಾಖೆ ದೂರು ದಾಖಲಿಸಿದೆ. ಮೂವರ ಪೈಕಿ ನವೀದ್‍ನನ್ನು ಪೊಲೀಸರು ಬಂಧಿಸಿದ್ದು, ಇನ್ನು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟ್ಯಾಟೂ ಹಾಕುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ: ಕಲಾವಿದ ಅರೆಸ್ಟ್

ಎಸ್ಪಿ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಎ ಎಸ್ ಐ ಕುಸಿದುಬಿದ್ದು ಸಾವು

ಶಾಲಾ ವಾಹನ ಡಿಕ್ಕಿ: ಮೆಸ್ಕಾಂ ಉದ್ಯೋಗಿ ಸಾವು

ದೇವಸ್ಥಾನಕ್ಕೆ ಆಗಮಿಸಿದ್ದ ಗರ್ಭಿಣಿ ಕುಸಿದು ಬಿದ್ದು ಸಾವು

ಸಾಮಾಜಿಕ ಹೋರಾಟಗಾರ, ನಟ ಚೇತನ್‌ ಗೆ ನೀಡಿದ್ದ ಗನ್‌ ಮ್ಯಾನ್ ಹಿಂಪಡೆದ ಸರಕಾರ

ಮೀನು ವ್ಯಾಪಾರಿ ಮೇಲೆ ತಲವಾರಿನಿಂದ ದಾಳಿ: 2 ಲಕ್ಷ ರೂ. ನಗದು ದರೋಡೆ

ಇತ್ತೀಚಿನ ಸುದ್ದಿ