ಗುಡ್ಡಕ್ಕೆ ಹೋದವರಿಗೆ ಕಾಣಸಿಕ್ಕಿದ್ದು ಭೀಕರ ದೃಶ್ಯ: ತಲೆ ಬುರುಡೆ, ಬಟ್ಟೆ ಬರೆ ಕಂಡು ಬೆಚ್ಚಿ ಬಿದ್ದ ಜನ
ವಿಟ್ಲ: ಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ನೆಕ್ಕರೆ ಕಾಡಿನಲ್ಲಿ ನಡೆದಿದೆ.
ನೆಕ್ಕರೆ ಕಾಡಿನ ಸಮೀಪದ ಗುಡ್ಡದಲ್ಲಿ ತಲೆಬುರುಡೆ ಮತ್ತು ಎಲುಬು ಹಾಗೂ ಬಟ್ಟೆ ಪತ್ತೆಯಾಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕಟ್ಟಿಗೆ ತರಲು ಗುಡ್ಡಕ್ಕೆ ಹೋದವರಿಗೆ ಈ ತಲೆ ಬುರುಡೆ, ಎಲುಬು ಬಟ್ಟೆಗಳು ಕಾಣ ಸಿಕ್ಕಿದ್ದು, ಅವರು ಮನೆಗೆ ಬಂದು ತಿಳಿಸಿದ್ದು, ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಈ ಹಿಂದೆ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಥಳದಲ್ಲಿ ವ್ಯಕ್ತಿಯ ಪಂಚೆ, ಶರ್ಟ್ ಪತ್ತೆಯಾಗಿದ್ದು, ತಲೆ ಬುರುಡೆ ಎಲುಬು ಯಾವ ವ್ಯಕ್ತಿಯದ್ದು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka