ಇನ್ಸ್ಟಾಗ್ರಾಮ್‌ನಲ್ಲಿ ಆಯ್ತು ಪರಿಚಯ: ಗರ್ಭಿಣಿಯಾದ ನಂತರ ಭ್ರೂಣವನ್ನು ಎಸೆದ ಗುಜರಾತ್ ಹುಡುಗಿ - Mahanayaka

ಇನ್ಸ್ಟಾಗ್ರಾಮ್‌ನಲ್ಲಿ ಆಯ್ತು ಪರಿಚಯ: ಗರ್ಭಿಣಿಯಾದ ನಂತರ ಭ್ರೂಣವನ್ನು ಎಸೆದ ಗುಜರಾತ್ ಹುಡುಗಿ

19/01/2025

ಗುಜರಾತ್ ನ ಸೂರತ್ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯು ಆಕೆಯ ಅಪ್ರಾಪ್ತ ಗೆಳೆಯನ ಜೊತೆಗೆ ಸರಸದ ನಂತರ ಗರ್ಭಧರಿಸಿದ್ದಾಳೆ. ಈ ವಿಚಾರ ಮನೆಯವರಿಗೆ ಗೊತ್ತಾಗುತ್ತದೆ ಅಂತಾ ಹೆದರಿ ನಾಲ್ಕು ತಿಂಗಳ ಭ್ರೂಣವನ್ನು ನಗರದ ಚರಂಡಿಯ ಬಳಿ ಎಸೆದಿದ್ದಾರೆ.

ಸ್ಥಳೀಯರು ಈ ಭ್ರೂಣವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ಭ್ರೂಣವನ್ನು ಸಂಗ್ರಹಿಸಿ ನ್ಯೂ ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ವೈದ್ಯರು ಅದು ಸತ್ತಿದೆ ಎಂದು ಘೋಷಿಸಿದ್ದಾರೆ.

ಪೊಲೀಸರ ಪ್ರಕಾರ, ಹುಡುಗಿ ಇನ್ಸ್ಟಾಗ್ರಾಮ್‌ನಲ್ಲಿ 17 ವರ್ಷದ ಹುಡುಗನನ್ನು ಭೇಟಿಯಾಗಿದ್ದಳು ಮತ್ತು ಅವನೊಂದಿಗೆ ಸಂಬಂಧ ಬೆಳೆಸಿದ್ದಳು.
ಸೂರತ್ ನ ಪಾಂಡೇಸರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದರಿಂದ ಗರ್ಭಧಾರಣೆಗೆ ಕಾರಣವಾಯಿತು ಎಂದು ಸೂರತ್ ನ ಉಪ ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಗುರ್ಜರ್ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ