ಗುಂಡೇಟಿನಿಂದ ಮಾಲಿಕನ ಪ್ರಾಣ ಉಳಿಸಿದ ಸ್ಮಾರ್ಟ್ ಫೋನ್!
ಬ್ರೆಜಿಲ್: ಡಕಾಯಿತರು ಹಾರಿಸಿದ ಗುಂಡಿನಿಂದ ಸ್ಮಾರ್ಟ್ ಫೋನ್ ತನ್ನ ಮಾಲಿಕನನ್ನು ರಕ್ಷಿಸಿದ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮೋಟ್ರೋಲಾ ಜಿ5 ಮೊಬೈಲ್ ತನ್ನ ಮಾಲಿಕನನ್ನು ರಕ್ಷಿಸಿದ ಮೊಬೈಲ್ ಆಗಿದೆ.
ಬ್ರೆಜಿಲ್ ನಲ್ಲಿ ಈ ಘಟನೆ ನಡೆದಿದ್ದು, ಡಕಾಯಿತರ ದಾಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವರು ಅದೃಷ್ಟ ವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿ ಬಂದಿದ್ದಾರೆ. ಇದಕ್ಕೆ ಅವರ ಜೇಬಿನಲ್ಲಿದ್ದ ಮೊಬೈಲ್ ಕಾರಣವಾಯಿತು. ಡಕಾಯಿತರು ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಗುಂಡು ಅವರ ಜೇಬಿನಲ್ಲಿದ್ದ ಮೊಬೈಲ್ ಗೆ ತಗುಲಿ, ಸೊಂಟವನ್ನು ಒರೆಸಿಕೊಂಡು ಹೋಗಿದೆ.
ಗುಂಡೇಟಿನಿಂದಾಗಿ ಮೊಬೈಲ್ ನ ಸ್ಕ್ರೀನ್ ಛಿದ್ರವಾಗಿದೆ. ಮೊಬೈಲ್ ಮಾಲಿಕ ಈ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾನೆ. ಗುಂಡನ್ನು ಮೊಬೈಲ್ ತಡೆಯದೇ ಇರುತ್ತಿದ್ದರೆ, ಆತನ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
SSLC ಪರೀಕ್ಷೆ ಪಾಸ್ ಆದ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ
ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ ಒಂದೇ ಮತ | ತನ್ನ ಕುಟುಂಬದ 5 ಮಂದಿಯೂ ಬಿಜೆಪಿಗೆ ವೋಟ್ ಹಾಕಲಿಲ್ಲ!
ಆರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ಕಣ್ಣೀರಿನ ವಿದಾಯ ಹೇಳಿದ ವಿರಾಟ್ ಕೊಹ್ಲಿ
ಬಾಲಕಿಗೆ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಬಯಲಿಗೆ: ಬಾಲಕಿಯ ಪತಿ ಅರೆಸ್ಟ್
ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವುದು ಹೇಗೆ?
ಮಳೆ ನೀರಿನಲ್ಲಿ ಕೊಚ್ಚಿ ಹೋದ ಲಕ್ಷಾಂತರ ರೂಪಾಯಿಯ ಮೀನುಗಳು!
ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್