ಗುಂಡಿನ ಚಕಮಕಿ: ಓರ್ವ ನಕ್ಸಲ್‌ ಹತ್ಯೆ - Mahanayaka
5:56 AM Thursday 12 - December 2024

ಗುಂಡಿನ ಚಕಮಕಿ: ಓರ್ವ ನಕ್ಸಲ್‌ ಹತ್ಯೆ

chathisgada
02/03/2022

ಛತ್ತೀಸ್​ಗಢ: ಭದ್ರತಾ ಪಡೆ ಮತ್ತು ನಕ್ಸಲರ​ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತ್ಯೆಯಾಗಿರುವ ಘಟನೆ ಮಂಗಳವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ದಾಂತೆವಾಡ ಜಿಲ್ಲೆಯ ಕಟೆಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ತುಮ್ಕಪಾಲ್ ಗ್ರಾಮದ ಬಳಿಯ ಕಾಡಿನಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್​ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎನ್‌ ಕೌಂಟರ್‌ ನಲ್ಲಿ ಹತ್ಯೆಗೀಡಾದ ನಕ್ಸಲ್ ದರ್ಬಾ ವಿಭಾಗದ ಪ್ಲಟೂನ್ ನಂ.31 ರ ಕಮಾಂಡರ್ ಲಖ್ಮಾ ಕವಾಸಿ ಎಂದು ಗುರುತಿಸಲಾಗಿದೆ.

ಈತ ಕಾಟೆಕಲ್ಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡೋಪಾಲ್ ನಿವಾಸಿಯಾಗಿದ್ದು, ಗುಂಡಿನ ಚಕಮಕಿ ಬಳಿಕ ಪೊಲೀಸರು ಪಿಸ್ತೂಲ್, 5 ಕೆಜಿ ಐಇಡಿ, ಪುಸ್ತಕಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ: ಸುರಕ್ಷಿತವಾಗಿ ಕೀವ್ ತೊರೆದ ಭಾರತೀಯರು; ಕಾರ್ಯಾಚರಣೆಗೆ 26 ವಿಮಾನ ಬಳಕೆ

ನ್ಯಾಯಾಧೀಶರಿಗೆ ಚಾಕುವಿನಿಂದ ಇರಿತ: ಕಚೇರಿ ಸಹಾಯಕ ಸಿಬ್ಬಂದಿಯ ಬಂಧನ

ಅಪರೂಪದ ಬರ್ಕ ಜಿಂಕೆ ಬೇಟೆ: ಹಾಸನದಲ್ಲಿ ಮೂವರ ಬಂಧನ

ಚೂರಿಯೊಂದಿಗೆ ಮಸೀದಿಗೆ ನುಗ್ಗಲು ಯತ್ನ: ಆರೋಪಿ ವಶಕ್ಕೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

 

ಇತ್ತೀಚಿನ ಸುದ್ದಿ