ಸಂಕ್ರಾಂತಿ ಹಬ್ಬಕ್ಕೆ ರಜೆ ನೀಡದ ಹಿನ್ನೆಲೆ: ಖಾಸಗಿ ಶಾಲೆಯ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ - Mahanayaka
3:31 PM Wednesday 5 - February 2025

ಸಂಕ್ರಾಂತಿ ಹಬ್ಬಕ್ಕೆ ರಜೆ ನೀಡದ ಹಿನ್ನೆಲೆ: ಖಾಸಗಿ ಶಾಲೆಯ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

gundlupete
15/01/2023

ಗುಂಡ್ಲುಪೇಟೆ: ಪಟ್ಟಣದ ಖಾಸಗಿ ಶಾಲೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂ ಜಾಗರಣಾ ವೇದಿಕೆ ಆರೋಪಿಸಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದೆ.

ಗುಂಡ್ಲುಪೇಟೆಯಲ್ಲಿನ ಸಿಎಂಐ ಶಾಲೆಯ ವಿರುದ್ಧ ಹಿಂದೂ ಜಾಗರಣ ವೇದಿಕೆಯು ಈ ಆರೋಪ ಮಾಡಿದೆ. ಸಂಕ್ರಾಂತಿ ಹಬ್ಬವನ್ನು ಮಕ್ಕಳು ಆಚರಿಸಬಾರದೆಂದು ಭಾನುವಾರವೂ ಶಾಲೆಗೆ ವಿದ್ಯಾರ್ಥಿಗಳನ್ನು  ಕರೆಸಿದ್ದಾರೆ. ಜೊತೆಗೆ, ರಾಷ್ಟ್ರನಾಯಕರ ಫೋಟೋಗಳನ್ನು ಶಾಲೆಯಲ್ಲಿ ಹಾಕದೇ ಅಗೌರವದ ತೋರುವಂತೆ ಮೂಲೆಯೊಂದರಲ್ಲಿ ಇಟ್ಟಿದ್ದಾರೆಂದು ಹಿಂದೂ ಜಾಗರಣ ವೇದಿಕೆಯ ನಂದೀಶ್ ದೂರಿನಲ್ಲಿ  ತಿಳಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸರು ದೂರು ಪಡೆದಿದ್ದು ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಶಾಲಾ ಮಕ್ಕಳ ಪೋಷಕರಿಂದ ಈ ಬಗ್ಗೆ ಯಾವುದೇ ವಿರೋಧಗಳು ಬಂದಿರುವ ಬಗ್ಗೆ ಮಾಹಿತಿ ಇಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ