ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಇನ್ಸ್ ಪೆಕ್ಟರ್ - Mahanayaka
11:15 AM Thursday 12 - December 2024

ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಇನ್ಸ್ ಪೆಕ್ಟರ್

eshwar rao
04/01/2022

ವಿಜಯನಗರ: ಪೊಲೀಸ್ ಇನ್ಸ್ ಪೆಕ್ಟರ್ ವೊಬ್ಬರು ತನ್ನ ಗರ್ಭಿಣಿ ಪತ್ನಿ ಮನೆಯಲ್ಲಿರುವ ವೇಳೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ   ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ  ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ.

ಸಶಸ್ತ್ರ ಮೀಸಲು ಪೊಲೀಸ್ ಇನ್ಸ್ ಪೆಕ್ಟರ್ 34 ವರ್ಷ ವಯಸ್ಸಿನ ಪಿ.ಈಶ್ವರ ರಾವ್ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದು, ತಮ್ಮ ಸೇವಾ ರಿವಾಲ್ವನಿಂದ ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆಗೆ ಮನೆಯಲ್ಲಿದ್ದ ಈಶ್ವರ ರಾವ್, ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಫೈರಿಂಗ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಪತ್ನಿ ಹರಿಪ್ರಿಯಾ ಮನೆಯಲ್ಲಿದ್ದರು. ಫೈರಿಂಗ್ ಶಬ್ದ ಕೇಳಿ ಓಡಿ ಬಂದು ನೋಡಿದ ವೇಳೆ ಈಶ್ವರ್ ರಾವ್ ನೆಲದಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಅವರು  ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ವೈಯಕ್ತಿಕ ಕಾರಣಗಳಿಂದಾಗಿ ಈಶ್ವರ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.  ನಾಲ್ಕು ವರ್ಷದ ಹಿಂದಷ್ಟೇ ಹರಿಪ್ರಿಯಾ ಎಂಬುವರನ್ನು ಈಶ್ವರ ರಾವ್ ಮದುವೆಯಾಗಿದ್ದಾರೆ. ಇವರಿಗೆ ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಹರಿಪ್ರಿಯಾ ಪ್ರಸ್ತುತ 7 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫೇಸ್ ಬುಕ್ ನಲ್ಲಿ ಪರಿಚಯ: 15 ವರ್ಷದ ಬಾಲಕನನ್ನು ಮದುವೆಯಾದ 22ರ ಯುವತಿ

3 ಸಾವಿರ ಲೀಟರ್ ಮದ್ಯವನ್ನು ಕಾಲುವೆಗೆ ಸುರಿದ ಅಫ್ಘಾನಿಸ್ತಾನ

ಮಹಿಳೆಯರ ಅಶ್ಲೀಲ ಚಿತ್ರ ಹರಾಜು ಹಾಕುತ್ತಿದ್ದ ‘ಬುಲ್ಲಿ ಬಾಯ್ಸ್ ಆ್ಯಪ್’ ನಿಷೇಧ

ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ? | ಡಿ.ಕೆ.ಶಿವಕುಮಾರ್ ಪ್ರಶ್ನೆ

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ  ವ್ಯಾಕ್ಸಿನೇಷನ್ ಗೆ ಹೆಚ್ಚಿನ ಒತ್ತು!

ಇತ್ತೀಚಿನ ಸುದ್ದಿ