ಕ್ಯಾಥೋಲಿಕ್  ಚರ್ಚ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 50 ಮಂದಿಯ ಭೀಕರ ಹತ್ಯೆ - Mahanayaka

ಕ್ಯಾಥೋಲಿಕ್  ಚರ್ಚ್ ಮೇಲೆ ಬಂದೂಕುಧಾರಿಗಳಿಂದ ದಾಳಿ: 50 ಮಂದಿಯ ಭೀಕರ ಹತ್ಯೆ

nigeria
06/06/2022

ನೈಋತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಗಳು ಭಾನುವಾರ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 50 ಜನರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಸೈಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್ ನಲ್ಲಿ ಗುಂಡಿನ ದಾಳಿ ನಡೆದಿದೆ. ಪವಿತ್ರ ಬಲಿಪೂಜೆ ನಡೆಯುವ ಸಮಯದಲ್ಲಿ ಬಂದೂಕು ಹಿಡಿದಿದ್ದ ಗುಂಪು ಭಕ್ತರ ಮೇಲೆ ಗುಂಡು ಹಾರಿಸಿತು.  ಅಲ್ಲದೆ ಚರ್ಚ್ ಮೇಲೆ ಸ್ಫೋಟಕಗಳನ್ನು ಎಸೆದಿದ್ದಾರೆ.

ಪೆಂಟೆಕೋಸ್ಟಲ್  ದಿನದ ವಿಶೇಷ ಪೂಜೆ ನಡೆಯುತ್ತಿದ್ದ ವೇಳೆ ನಾಲ್ಕು ಉಗ್ರ ಗುಂಪು ಚರ್ಚ್‌ ಗೆ ನುಗ್ಗಿತು.  ತದನಂತರ  ಭಕ್ತರ ಮೇಲೆ ಗುಂಡಿನ ಮಳೆ ಸುರಿದಿದ್ದಾರೆ. ದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ.

ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ.  ವಿಶ್ವಾಸಿಗಳ ನಿಧನಕ್ಕೆ ಪೋಪ್ ಫ್ರಾನ್ಸಿಸ್ ಸಂತಾಪ ವ್ಯಕ್ತಪಡಿಸಿದ್ದಾರೆ.  ನೈಜೀರಿಯಾ ಅಧ್ಯಕ್ಷ ಮೊಹಮ್ಮದ್ ಬುಹಾರಿ ಕೂಡ ದಾಳಿಯನ್ನು ಖಂಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಕ್ಷಿಣ ಕನ್ನಡದ ಸುಳ್ಯದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ಕೊರಿಯನ್ ವಿಡಿಯೋ ನೋಡುವ ಚಟದಿಂದ ಹೊರಬರಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕಿ!

ದೇಶದ್ರೋಹಿ ಕೃತ್ಯ: ಪಂಚಾಯತ್ ರಸ್ತೆಗೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹೆಸರು!

ಪಠ್ಯಪರಿಷ್ಕರಣೆ ಸಮಿತಿಯಿಂದ ಮತ್ತೊಂದು ಯಡವಟ್ಟು: ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ಇತ್ತೀಚಿನ ಸುದ್ದಿ