ವಿಕೃತ ವಿಚಾರಧಾರೆಯ ರೋಹಿತ್ ಚಕ್ರತೀರ್ಥಗೆ ವೇಣೂರು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನ ಸರಿಯಲ್ಲ: ಗುರುನಾರಾಯಣ ಸ್ವಾಮಿ ಸೇವಾ ಸಂಘ - Mahanayaka
6:06 AM Thursday 12 - December 2024

ವಿಕೃತ ವಿಚಾರಧಾರೆಯ ರೋಹಿತ್ ಚಕ್ರತೀರ್ಥಗೆ ವೇಣೂರು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನ ಸರಿಯಲ್ಲ: ಗುರುನಾರಾಯಣ ಸ್ವಾಮಿ ಸೇವಾ ಸಂಘ

guru narayan swami seva sangh
20/02/2023

ವೇಣೂರು: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ  ಬ್ರಹ್ಮಶ್ರೀ ನಾರಾಯಣ  ಗುರುಗಳ  ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದು ಹಾಕಿದ ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥ ಆಗಮಿಸಲಿದ್ದು, ಇದರ ವಿರುದ್ಧ ಬಿಲ್ಲವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಮತ್ತು ಧರ್ಮ ಎನ್ನುವ  ವಿಚಾರದಲ್ಲಿ ಉಪನ್ಯಾಸ  ನೀಡಲು  ಆಹ್ವಾನ ನೀಡಲಾಗಿದ್ದು, ಇದರ ವಿರುದ್ಧ  ಬೆಳ್ತಂಗಡಿ  ಗುರುನಾರಾಯಣ ಸ್ವಾಮಿ ಸೇವಾ ಸಂಘದ  ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ದಡ್ಕ ರವರ ನೇತೃತ್ವದಲ್ಲಿ ಬಿಲ್ಲವ ಸಮಾಜದ ಪ್ರಮುಖರ ನಿಯೋಗ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್  ಅಜಿಲರವರನ್ನು ಭೇಟಿ ಮಾಡಿ ಮಾತುಕತೆ  ನಡೆಸಿ ರೋಹಿತ್ ಚಕ್ರತೀರ್ಥ ಉಪನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಭಗವಾನ್  ಮಹಾವೀರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಞಿಣ್ಣ ರೈ ಮುಂತಾದ ದಾರ್ಶನಿಕರ  ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ಪಠ್ಯ ಪುಸ್ತಕ  ಪರಿಷ್ಕರಣೆ  ನಡೆಸಿ, ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡ ವಿಕೃತ  ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು  ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಒಕ್ಕೊರಲಿನಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪದ್ಮಪ್ರಸಾದ್ ಅಜಿಲರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ದಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಆಹ್ವಾನಿಸುವ  ಯಾವುದೇ  ಉದ್ದೇಶ ನಮಗಿಲ್ಲ. ನಿಮ್ಮ ಭಾವನೆಯನ್ನು  ಗೌರವಿಸಿ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ  ತಿಳಿಸುವುದಾಗಿ ಭರವಸೆಯಿತ್ತರು.

guru narayan swami seva sangh 1

ಈ ವೇಳೆ  ಸಂಘದ ಮಾಜಿ ಅಧ್ಯಕ್ಷರಾದ ಪಿ.ಕೆ.ರಾಜು ಪೂಜಾರಿ,  ಮಾಜಿ ಪ್ರಧಾನ ಕಾರ್ಯದರ್ಶಿ ಎಚ್. ಧರ್ಣಪ್ಪ ಪೂಜಾರಿ, ಬಳಂಜ, ಉಪಾಧ್ಯಕ್ಷರಾದ ಶೇಖರ ಬಂಗೇರ, ಅಳದಂಗಡಿ ವಲಯಾಧ್ಯಕ್ಷರಾದ ಕೊಡಂಗೆ ಸಂಜೀವ  ಪೂಜಾರಿ,  ವೇಣೂರು ವಲಯಾಧ್ಯಕ್ಷರಾದ ಹರೀಶ ಪೂಜಾರಿ ಪೊಕ್ಕಿ, ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ನಿತೇಶ್ ಕೋಟ್ಯಾನ್, ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಮನೋಹರ್ ಕುಮಾರ್, ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಅಶ್ವಥ್ ಕುಮಾರ್, ವೇಣೂರು ಘಟಕದ ಅಧ್ಯಕ್ಷರಾದ ಹರಿಣಿ ಕರುಣಾಕರ ಪೂಜಾರಿ, ಸಂಘದ ನಿರ್ದೇಶಕರಾದ ರಮೇಶ್ ಪೂಜಾರಿ, ಪಡ್ಡಾಯಿ ಮಜಲು, ವಿಶ್ವನಾಥ ಪೂಜಾರಿ, ಕುದ್ಯಾಡಿ, ಸತೀಶ್ ಕಾಶಿಪಟ್ನ, ರವೀಂದ್ರ ಅಮೀನ್, ಬಳಂಜ, ನ್ಯಾಯವಾದಿ ಸತೀಶ್ ಪೂಜಾರಿ, ಪಿ. ಎನ್, ಯುವ ವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಎಂ.ಕೆ ಪ್ರಸಾದ್, ನವೀನ್ ಪೂಜಾರಿ, ಪಚ್ಚೇರಿ, ನಾರಾವಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅದ್ಯಕ್ಷರಾದ ಯೋಗೀಶ ಪೂಜಾರಿ, ಐಸಿರಿ, ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್, ಡೊಂಕಬೆಟ್ಟು, ಹರೀಶ್ಚಂದ್ರ ಪೂಜಾರಿ, ಬಜಿರೆಗುತ್ತು, ಚಂದ್ರಶೇಖರ, ಅಳದಂಗಡಿ, ಸುರೇಶ ಪೂಜಾರಿ, ಅಂಡಿಂಜೆ,  ಪದ್ಮನಾಭ ಪೂಜಾರಿ, ನಿಟ್ಟಡೆ, ಸದಾನಂದ ಪೂಜಾರಿ, ನಾರಾಯಣ ಪೂಜಾರಿ, ಸಂತೋಷ್ ಪೂಜಾರಿ, ಮಹಾಬಲ ಪೂಜಾರಿ, ಯಶೋಧರ ಕೋಟ್ಯಾನ್, ಧರ್ಣಪ್ಪ ಪೂಜಾರಿ, ದೋರಿಂಜೆ, ವಿಠಲ ಪೂಜಾರಿ, ನಿಟ್ಟಡೆ, ಲಕ್ಷ್ಮಣ  ಪೂಜಾರಿ, ಗೋಪಾಲ ಪೆಂರ್ಬುಡ, ಸತೀಶ ಕಜಿಪಟ್ಟ, ಸದಾಶಿವ ಪೂಜಾರಿ ಊರ, ಚಂದ್ರಶೇಖರ, ಸಂದೀಪ್ ಎಸ್.ಎನ್, ನಾರಾಯನ ಪೂಜಾರಿ ಉಚ್ಚೂರು ಮುಂತಾದವರು  ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ