ನನ್ನ ಗಂಡ ಮಾಡಿರೋದು ತಪ್ಪು, ಗುರೂಜಿ ಮೇಲೆ ಅವರಿಗ್ಯಾಕೆ ಅಷ್ಟು ಸಿಟ್ಟು?: ಆರೋಪಿ ಮಹಾಂತೇಶ ಪತ್ನಿ ವನಜಾಕ್ಷಿ

sarala vastu
06/07/2022

ಹುಬ್ಬಳ್ಳಿ: ಚಂದ್ರಶೇಖರ್ ಗುರೂಜಿ ಹತ್ಯೆಯ ಹಿಂದೆ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಕೈವಾಡ ಇದೆ ಎಂದು ಸಾಕಷ್ಟು ಸುದ್ದಿಗಳು ಹರಡಿವೆ. ಜೊತೆಗೆ ಬೇನಾಮಿ ಆಸ್ತಿ ವಿಚಾರವೂ ಭಾರೀ ಸದ್ದಾಗುತ್ತಿದೆ. ಈ ನಡುವೆ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಗುರೂಜಿ ನಮ್ಮ ತಂದೆ ಇದ್ದಂತೆ. ನನಗೆ ಬೇಸರವಾದಾಗ ಗುರೂಜಿ ಜೊತೆಗೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ ಎನ್ನುವುದು ಸುಳ್ಳು ಸುದ್ದಿ, ನನ್ನ ಪತಿ ಸರಳವಾಸ್ತುನಲ್ಲಿ ಬಾಂಬೆ ಹೆಡ್ ಆಗಿ ಕೆಲಸ ಮಾಡುತ್ತಿದ್ದರು. ಸಾಲ ಮಾಡಿ ಅಪಾರ್ಟಮೆಂಟ್​ ನಲ್ಲಿ ಮನೆ ತೆಗೆದುಕೊಂಡಿದ್ದೇವೆ. ನನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕೊಲೆ ವೀಡಿಯೋ ನೋಡಿ ನನ್ನ ಮನಸ್ಸಿಗೆ ನೋವಾಗಿದೆ. ಗುರೂಜಿ ಮೇಲೆ ನಮ್ಮ ಮನೆಯವರಿಗೆ ಇಷ್ಟ್ಯಾಕೆ ಆಕ್ರೋಷ ಅಂತಾ ಗೊತ್ತಾಗ್ತಿಲ್ಲ ಎಂದು ವನಜಾಕ್ಷಿ ಹೇಳಿದ್ದಾರೆ. ಪೊಲೀಸರೂ ಸಹ ವಿಚಾರಣೆಗೆ ಕರೆದೊಯ್ದಿದ್ರು. ವಿಚಾರಣೆಗೆ ಸಹಕರಿಸಿದ್ದೇನೆ. ನನ್ನ ಗಂಡ ಮಾಡಿದ್ದು ತಪ್ಪು ಅಂತಾ ವನಜಾಕ್ಷಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version