ಅಪಘಾತಕ್ಕೀಡಾಗಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಗೆ ಪಿಎಸ್ ಐ ಸತೀಶ್ ನಾಯ್ಕ ಮನವಿ
10/11/2020
ಚಳ್ಳಕೆರೆ: ಹಿರೇಹಳ್ಳಿ ಹಾಗೂ ಬುಕ್ಲೂರಹಳ್ಳಿ ಗೇಟ್ ಮಧ್ಯದಲ್ಲಿ ಇರುವ ರುದ್ರಮ್ಮನಹಳ್ಳಿ ಗ್ರಾಮದ ಪೂಜಾರಿ ಓಬಣ್ಣ ಇವರ ಜಮೀನು ಮುಂದಿನ ಎನ್ ಹೆಚ್ 150(ಎ) ಟಾರ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಈ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಶಂಕಿಸಲಾಗಿದೆ. ವ್ಯಕ್ತಿಯು ನೀಲಿ ಬಣ್ಣದ ಗೆರೆಗಳುಳ್ಳ ಶರ್ಟ್ ಧರಿಸಿದ್ದು, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಬಲಗೈಯಲ್ಲಿ ನೂಲೊಂದನ್ನು ಕಟ್ಟಿಕೊಂಡಿದ್ದಾನೆ. ಮೃತನ ಹೆಸರು ವಿಳಾಸ ತಿಳಿದು ಬಂದಿಲ್ಲ.
ಈ ವ್ಯಕ್ತಿಯ ಮಾಹಿತಿ ಯಾರಿಗಾದರೂ ಇದ್ದಲ್ಲಿ ತಳಕು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಳುಕು ಪಿಎಸ್ ಐ ಸತೀಶ್ ನಾಯ್ಕ ಕೋರಿದ್ದಾರೆ. ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ : 08190 206634 ಮತ್ತು 9480803160ಗೆ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ.