ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಹಾಡ ಹಗಲೇ ಯುವತಿಯ ಕತ್ತು ಸೀಳಿದ ಪಾಗಲ್ ಪ್ರೇಮಿ! - Mahanayaka
2:48 PM Thursday 23 - January 2025

ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕೆ ಹಾಡ ಹಗಲೇ ಯುವತಿಯ ಕತ್ತು ಸೀಳಿದ ಪಾಗಲ್ ಪ್ರೇಮಿ!

crime news
16/02/2022

ಸೂರತ್: ಪ್ರೇಮ ನಿವೇದನೆಯನ್ನು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನ ಕಮ್ರೇಜ್ ಬಳಿಯ ಪಸೋದರ ಎಂಬಲ್ಲಿ ನಡೆದಿದೆ.

21 ವರ್ಷ ವಯಸ್ಸಿನ ಗ್ರೀಷ್ಮಾ ವೆಕಾರಿಯಾ  ಎಂಬವರು ಹತ್ಯೆಗೀಡಾಗಿರುವ ಯುವತಿಯಾಗಿದ್ದು, ಫೆನಿಲ್ ಗೋಯಾನಿ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ಈ ಘಟನೆ ನಡೆದಿದ್ದು, ಯುವತಿಯನ್ನು ಹತ್ಯೆ ಮಾಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ಆರೋಪಿ ಫೆನಿಲ್, ಗ್ರೀಷ್ಮಾ ಮನೆಗೆ ಬಂದಿದ್ದು, ಆಕೆಯನ್ನು ಮನೆಯಿಂದ ಹೊರಗೆಳೆದುಕೊಂಡು ಬಂದು ಸಾರ್ವಜನಿಕರ ಎದುರೇ ಕತ್ತು ಸೀಳಿದ್ದಾನೆ. ಆತನನ್ನು ತಡೆಯಲು ಸ್ಥಳೀಯರು ಸಾಕಷ್ಟು ಪ್ರಯತ್ನ ನಡೆಸಿದ್ದು, ಆದರೆ, ಅವರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ. ಕತ್ತು ಸೀಳಿದ ಪರಿಣಾಮ ಗ್ರೀಷ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ಆರೋಪಿಯು ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಗ್ರೀಷ್ಮಾಳನ್ನು ರಕ್ಷಿಸಲು ಆಕೆಯ ಸಹೋದರ ಮುಂದಾದಾಗ ಆತನ ಮೇಲೂ ಫೆನಿಲ್  ಚಾಕುವಿನಿಂದ ಇರಿದಿದ್ದು, ಆತನಿಗೂ ತೀವ್ರವಾದ ಗಾಯಗಳಾಗಿವೆ. ಈ ಘಟನೆಯ ದೃಶ್ಯ ಬೆಚ್ಚಿಬೀಳಿಸುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಚಿವ ಈಶ್ವರಪ್ಪ  ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ

ನೀನು ಲೂಟಿಕೋರ ನನ್ಮಗ, ದೇಶದ್ರೋಹಿ: ಈಶ್ವರಪ್ಪ ವಿರುದ್ಧ ಗುಡುಗಿದ ಡಿ.ಕೆ.ಶಿವಕುಮಾರ್

ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಸಚಿವ ಈಶ್ವರಪ್ಪ ಕೈ ಬಿಡುವಂತೆ ಆಗ್ರಹಿಸಿ ನಿಲುವಳಿ ಸೂಚನೆ; ಸಿದ್ದರಾಮಯ್ಯ

ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು

 

ಇತ್ತೀಚಿನ ಸುದ್ದಿ