ಹಾಡಹಗಲೇ ಗನ್ ತೋರಿಸಿ ಮಹಿಳೆಯ ಸರ ಎಳೆದ ಸರಗಳ್ಳರು!
ಗ್ವಾಲಿಯರ್: ಹಾಡಹಗಲೇ ದುಷ್ಕರ್ಮಿಗಳು ಗನ್ ಪಾಯಿಂಟ್ ನಲ್ಲಿ ಮಹಿಳೆಯ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದ್ದು, ಈವರೆಗೆ ಬೈಕ್ ನಲ್ಲಿ ಬಂದು ಸರ ಕದಿಯುತ್ತಿರುವ ಪ್ರಕರಣಗಳನ್ನು ಕೇಳಿರ ಬಹುದು ಆದರೆ ಇದೀಗ ಸರಗಳ್ಳರು ಕೂಡ ಮಾರಕಾಸ್ತ್ರಗಳೊಂದಿಗೆ ಫೀಲ್ಡಿಗೆ ಇಳಿದಿರುವುದು ಸಾರ್ವಜನಿಕರಿಗೆ ಆತಂಕವನ್ನು ಸೃಷ್ಟಿ ಮಾಡಿದೆ.
ಈ ಸಂಬಂಧ ಸಿಸಿ ಕ್ಯಾಮರದಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿದ್ದು, ಸ್ಕೂಟಿಯಲ್ಲಿ ಮಹಿಳೆ ಹಾಗೂ ಮಹಿಳೆಯ ಮಗ ಎನ್ನಲಾಗಿರುವ ಇಬ್ಬರು ಪ್ರಯಾಣಿಸುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ ಕಾಯುತ್ತಿರುತ್ತಾರೆ. ಸ್ಕೂಟಿ ತಮ್ಮನ್ನು ಸಮೀಪಿಸುತ್ತಿದ್ದಂತೆಯೇ ಬೈಕ್ ನ ಹಿಂಬದಿ ಸವಾರ ಬೈಕ್ ನಿಂದ ಇಳಿದು ಮಹಿಳೆಯ ಕೊರಳಿಗೆ ಕೈ ಹಾಕಿ ಸರವನ್ನು ಎಳೆಯುತ್ತಾನೆ. ಈ ವೇಳೆ ಮಹಿಳೆ ಪ್ರತಿಭಟಿಸಲು ಯತ್ನಿಸಿದಾಗ ಗನ್ ತೆಗೆದು ಮಹಿಳೆಗೆ ಗುರಿಯಿಟ್ಟಿದ್ದಾನೆ ಇದರಿಂದ ಮಹಿಳೆ ಹೆದರಿ ಸುಮ್ಮನಾಗಿದ್ದಾಳೆ.
ಸಾರ್ವಜನಿಕರ ಎದುರೇ ಈ ಘಟನೆ ನಡೆದಿದ್ದು, ಸರಗಳ್ಳ ರಾಜಾರೋಷವಾಗಿ ಗನ್ ಹಿಡಿದುಕೊಂಡು ಸರ ಕಸಿದು ಆರಾಮದಲ್ಲಿ ಬೈಕ್ ಏರಿ ಹೋಗಿದ್ದಾನೆ. ಈ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಘಟನೆ ಸಂಬಂಧ ಗ್ವಾಲಿಯರ್ ನ ಪಾಡಾವ್ ಪೊಲೀಸ್ ಠಾಣೆಯ ಟೌನ್ ಇನ್ಸ್ ಪೆಕ್ಟರ್ ವಿವೇಕ್ ಅಸ್ತಾನಾ ಅವರು ಆರೋಪಿಗಳನ್ನು ತಕ್ಷಣವೇ ಬಂಧಿಸುವುದಾಗಿದೆ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
24 ಗಂಟೆಗಳಲ್ಲಿ 46,759 ಹೊಸ ಕೊರೊನಾ ಪ್ರಕರಣಗಳು | 599 ಸಾವು
ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!
ಅಮಾನವೀಯ ಘಟನೆ: ಪತ್ನಿಯ ಖಾಸಗಿ ಅಂಗಕ್ಕೆ ಸೂಜಿದಾರದಿಂದ ಹೊಲಿಗೆ ಹಾಕಿದ ಪತಿ
ಮೈಸೂರು: ಅತ್ಯಾಚಾರ ಪ್ರಕರಣ | ತಮಿಳುನಾಡಿನಲ್ಲಿ ಐವರು ಆರೋಪಿಗಳ ಬಂಧನ
ಮೈಸೂರಿನ ಬೆನ್ನಲ್ಲೇ ಮತ್ತೊಂದು ಸಾಮೂಹಿಕ ಅತ್ಯಾಚಾರ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ | ನಟಿ ರಮ್ಯಾ ಪ್ರಶ್ನೆ
ಸುದ್ದಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ | ವರದಿಗಾರ ಸೇರಿದಂತೆ 6 ಮಂದಿ ಅರೆಸ್ಟ್