ಮಂಗಳೂರು: ಹಾಡಹಗಲೇ ರೌಡಿಶೀಟರ್ ನ ಭೀಕರ ಹತ್ಯೆ
ದಕ್ಷಿಣ ಕನ್ನಡ(ಮಂಗಳೂರು): ರೌಡಿಶೀಟರ್ ವೋರ್ವನನ್ನು ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಎಮ್ಮೆಕೆರೆಯಲ್ಲಿ ನಡೆದಿದೆ.
ನಗರದ ಹೊಯ್ಗೆ ಬಜಾರ್ ನಿವಾಸಿ 25 ವರ್ಷ ವಯಸ್ಸಿನ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ. ಈತನ ವಿರುದ್ಧವೂ ರೌಡಿಶೀಟರ್ ಸೇರಿದಂತೆ 3 ಕೇಸ್ ಗಳಿದ್ದವು ಎನ್ನಲಾಗಿದೆ.
ವರದಿಗಳ ಪ್ರಕಾರ, ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ರಾಹುಲ್ ಇಂದು ಎಮ್ಮೆಕೆರೆ ಪ್ರದೇಶದಲ್ಲಿ ನಡೆದ ಕೋಳಿ ಅಂಕಕ್ಕೆ ತೆರಳಿದ್ದು, ಅಲ್ಲಿಂದ ತನ್ನ ಮನೆಯ ಕಡೆಗೆ ವಾಪಸ್ ಆಗುತ್ತಿದ್ದ ವೇಳೆ. ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ನಡೆಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹೃದಯಾಘಾತಕ್ಕೂ ಮೊದಲು ಕಂಡು ಬರುವ ಮುನ್ಸೂಚನೆಗಳೇನು?
ಬೀದಿ ನಾಯಿಗಳ ದಾಳಿಗೆ ಮತ್ತೊಂದು ಮುಗ್ದ ಜೀವ ಬಲಿ
ಮಾರಕಾಸ್ತ್ರಗಳಿಂದ ಕೊಚ್ಚಿ ಬಾಡಿ ಬಿಲ್ಡರ್ ನ ಬರ್ಬರ ಹತ್ಯೆ!
ಕೆಲಸ ಮುಗಿಸಿ ಬರುತ್ತಿದ್ದ ಯುವತಿಯ ಮೇಲೆ ಆಟೋ ಚಾಲಕ, ಆತನ ಸ್ನೇಹಿತನಿಂದ ಅತ್ಯಾಚಾರ