ಹಾಡಹಗಲೇ ವಕೀಲ ದಂಪತಿಯನ್ನು ಅಟ್ಟಾಡಿಸಿ ಭೀಕರ ಹತ್ಯೆ!
ಹೈದರಾಬಾದ್: ಪ್ರಸಿದ್ದ ವಕೀಲ ದಂಪತಿಯನ್ನು ಇಂದು ಮಧ್ಯಾಹ್ನ ಮಂಘಾನಿ ಹಾಗೂ ಪೆದ್ದಮಲ್ಲಿ ಪಟ್ಟಣಗಳ ನಡುವಿನ ಮುಖ್ಯ ರಸ್ತೆಯಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತೆಲಂಗಾಣ ಹೈಕೋರ್ಟ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ವಾಮನ್ ರಾವ್ ಹಾಗೂ ಅವರ ಪತ್ನಿ ಪಿ.ವಿ.ನಾಗಮಣಿ, ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ದಾಳಿಕೋರರು ಇವರನ್ನು ಅಟ್ಟಿಸಿಕೊಂಡು ಬಂದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದವರೆಲ್ಲರೂ ವೃತ್ತಿಪರ ಕೊಲೆಗಾರರು ಎಂದು ಹೇಳಲಾಗಿದೆ.
ಹತ್ಯೆ ನಡೆಯುವ ವೇಳೆ ಕೆಲವರು ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದ್ದು, ರಕ್ತದ ಮಡುವಲ್ಲಿ ಬಿದ್ದಿದ್ದ ವಾಮನ್ ರಾವ್ ಅವರ ಬಳಿ ದಾಳಿ ಮಾಡಿದ್ದು ಯಾರು ಎಂದು ಕೇಳಿದಾಗ “ಕುಂಟಿ ಶ್ರೀನಿವಾಸ್ ಎಂದು ಅವರು ಹೇಳಿದ್ದಾರೆ. ಈ ಕುಂಟಿ ಶ್ರೀನಿವಾಸ್ಗ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯನಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ವಕೀಲರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬದುಕುಳಿಯಲಿಲ್ಲ. ಇನ್ನೂ ಇದಕ್ಕೂ ಮೊದಲು ಇದೇ ವಕೀಲರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಧೀಶರಿಗೆ ಅಧಿಕೃತ ದೂರು ನೀಡಿದ್ದರು.
ಘಟನೆ ಸಂಬಂಧ ವಾಮನ್ ರಾವ್ ತಂದೆ ಕೃಷ್ಣರಾವ್, ಕುಂಟಿ ಶ್ರೀನಿವಾಸ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದು, ಶ್ರೀನಿವಾಸ್ ನ 10 ಸಹಚಾರರನ್ನು ಕಸ್ಟಡಿಗೆ ಪಡೆಯಲಾಗಿದೆ. ಈ ಪ್ರಕರಣದ ತನಿಖೆಗೆ 6 ತಂಡಗಳನ್ನು ರಚಿಸಿದ್ದೇವೆ ಎಂದು ಪೊಲೀಸ್ ಕಮಿಷನರ್ ವಿ.ಸತ್ಯನಾರಾಯಣ ಹೇಳಿದ್ದಾರೆ.