ಹಾಡಹಗಲೇ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!
ಬಂಟ್ವಾಳ: ಮಹಿಳೆಯೊಬ್ಬರನ್ನು ಹಾಡಹಗಲೇ ವ್ಯಕ್ತಿಯೋರ್ವ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಕೊಡಾಜೆಯ ಗಣೇಶ ನಗರದಲ್ಲಿ ನಡೆದಿದೆ.
ಶಕುಂತಳಾ ಎಂಬ ಮಹಿಳೆ ಹತ್ಯೆಗೀಡಾದವರು ಎಂದು ಹೇಳಲಾಗಿದ್ದು, ಶ್ರೀಧರ್ ಎಂಬಾತ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಶಕುಂತಳಾ ಸುಮಾರು 5 ವರ್ಷಗಳಿಂದ ಪುತ್ತೂರಿನ ಕೊಂಬೆಟ್ಟುವಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿ ಶ್ರೀಧರ ಇತ್ತೀಚೆಗೆ ಮಹಿಳೆಯ ಮನೆಯ ಬಳಿ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಕುಂತಳಾ ಅವರು ಶ್ರೀಧರ್ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.
ಇದೀಗ ಕೊಡಾಜೆಯಲ್ಲಿ ಆರೋಪಿಯು ಕೊಡಾಜೆಯಲ್ಲಿ ಏಕಾಏಕಿ ಶಕುಂತಳಾ ಅವರಿಗೆ ಇರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಯಂಬುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ
ಘಟನೆ ಸಂಬಂಧ ಮಹಿಳೆಯ ಪತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಕೃತ್ಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಘಟನೆ ಸಂಬಂಧ ಎಸ್.ಪಿ. ಋಷಿಕೇಶ್ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ!
ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್: ವಿದ್ಯುತ್ ಬೆಲೆ ಏರಿಕೆ!
21 ವರ್ಷ ಜೊತೆಗಿದ್ದ ಎರಡನೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ!
ಶಾಲೆಗಳಿಗೆ ರಜೆ, ಪೆಟ್ರೋಲ್ ಗಾಗಿ ಕಾದು ಕುಳಿತ ಜನರು: ಶ್ರೀಲಂಕಾದ ದುಸ್ಥಿತಿ!
ಹೆಲ್ಮೆಟ್ ಧರಿಸಿದ್ದರಿಂದ ಯುವತಿಯ ಪ್ರಾಣ ಉಳಿಯಿತು!