ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್ - Mahanayaka

ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್

bihar news
13/09/2021

ಪಾಟ್ನಾ: 500 ರೂಪಾಯಿ ಹಫ್ತಾ ನೀಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೋರ್ವನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದ್ದು, ಮಹಿಳೆಯ ಪತಿಯು ಮದ್ಯ ಮತ್ತು ಊಟಕ್ಕೆ ಹಣ ನೀಡಲಿಲ್ಲ ಎಂದು ರೌಡಿಗಳಿಬ್ಬರು ಈ ನೀಚ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ.

ಸಾವನ್ ಯಾದವ್ ಮತ್ತು ಕನ್ಹಯ್ಯಾ ಎಂಬವರು ಈ ಕೃತ್ಯ ನಡೆಸಿರುವ ಆರೋಪಿಗಳಾಗಿದ್ದು, ಮಹಿಳೆಯ ಪತಿಯಿಂದ ಮದ್ಯ ಹಾಗೂ ಊಟಕ್ಕಾಗಿ 500 ರೂಪಾಯಿ ಹಫ್ತಾ ನೀಡುವಂತೆ ಬೆದರಿಸಿದ್ದಾರೆ. ಈ ವೇಳೆ ಆತ ಹಣ ನೀಡಲು ನಿರಾಕರಿಸಿದ್ದಾನೆ. ಈ ವೇಳೆ ಇವರಿಬ್ಬರೂ ಆತನ ಪತ್ನಿಯನ್ನು ಬಲವಂತವಾಗಿ ಪ್ರತ್ಯೇಕ ಸ್ಥಳಕ್ಕೆ ಎಳೆದೊಯ್ದು ಥಳಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ  ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳ ಪೈಕಿ ಕನ್ಹಯ್ಯಾ ಎಂಬಾತನ ಬಳಿ ಪಿಸ್ತೂಲ್ ಇತ್ತು ಎಂದು ಹೇಳಲಾಗಿದೆ. ಈ ಪಿಸ್ತೂಲ್ ತೋರಿಸಿ ಮಹಿಳೆಯ ಪತಿಯನ್ನು ಬೆದರಿಸಿ ಮಹಿಳೆಯನ್ನು ಎಳೆದೊಯ್ದಿದ್ದರು. ಅತ್ಯಾಚಾರ ನಡೆಸಿದ ಬಳಿಕ ಮಹಿಳೆ ಹೇಗೋ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದ ಊರೊಂದಕ್ಕೆ ಹೋಗಿ ಸೇರಿದ್ದಾಳೆ. ಆಕೆಯ ಬಟ್ಟೆಯನ್ನು ಕೂಡ ಆರೋಪಿಗಳ ನೀಡಿರಲಿಲ್ಲ ಎಂದು ಹೇಳಲಾಗಿದೆ.

ಇನ್ನೂ ಮಹಿಳೆ ಆರೋಪಿಗಳಿಂದ ತಪ್ಪಿಸಿಕೊಂಡು ಸೇರಿದ ಊರಿನವರು ಮಹಿಳೆಯ ಮೇಲೆ ಮಾನವೀಯತೆ ತೋರಿಸಿದ್ದು, ಆಕೆಗೆ ಬಟ್ಟೆ ನೀಡಿ ಉಪಚರಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದು,  ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಶಾಲೆಯ ಪ್ರಯೋಗಾಲಯದಲ್ಲಿದ್ದ ಆ್ಯಸಿಡ್ ಬಾಟಲಿ ಒಡೆದು ನಾಲ್ವರು ವಿದ್ಯಾರ್ಥಿನಿಯರಿಗೆ ಗಾಯ!

ಹೈದರಾಬಾದ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ | ಸಿಡಿದೆದ್ದ ಜನರು

ಅಜ್ಜಿಯ ಮನೆಗೆ ಬಂದ ಮಹಿಳೆ, ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ!

“ಮಗಳನ್ನು ಹೇಗಾದರೂ ಬದುಕಿಸಿ” ಎಂದು ಅತ್ತು ಗೋಗರೆದರೂ ಬಾಗಿಲು ತೆರೆಯದ ಆಸ್ಪತ್ರೆ | 5 ವರ್ಷದ ಬಾಲಕಿ ಸಾವು

ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸಿ, ಅಂಗಾಂಗ ಮುಟ್ಟಿ ವಿಕೃತವಾಗಿ ಥಳಿಸಿದ ತಂಡ: ವಿಡಿಯೋ ವೈರಲ್

ಬಿರಿಯಾನಿ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿ ಸಾವು: 15 ದಿನಗಳ ಹಳೆಯ ಕೋಳಿ ಮಾಂಸದಲ್ಲಿ ಬಿರಿಯಾನಿ ತಯಾರಿಕೆ!

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ಸಂಖ್ಯೆಯನ್ನು ಸೇರಿಸಿಕೊಳ್ಳಿ. ಮಾಧ್ಯಮದ ಬೆಳವಣಿಗೆಗೆ ನಿಮ್ಮ ಸಹಕಾರವಿರಲಿ.

ಇತ್ತೀಚಿನ ಸುದ್ದಿ