ಸೌದಿ ನಾಗರಿಕರಿಗೆ ಹಜ್ ನೋಂದಣಿ ಪ್ರಕ್ರಿಯೆ ಆರಂಭ
![](https://www.mahanayaka.in/wp-content/uploads/2025/02/913867741c55ce6bc7a3ded85e2ad0acf91c9a4b9369e1e9b07fe087f565d9db.0.jpg)
08/02/2025
ಸೌದಿ ನಾಗರಿಕರು ಮತ್ತು ಸೌದಿಯಲ್ಲಿರುವ ವಿದೇಶಿಯರು ಹಜ್ ನಿರ್ವಹಣೆಗಾಗಿ ನೋಂದಾಯಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ನುಸುಕ್ ಅಪ್ಲಿಕೇಶನ್ ಮೂಲಕ ಅಥವಾ ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಈ ರಿಜಿಸ್ಟ್ರೇಷನ್ ಮಾಡಬಹುದಾಗಿದೆ.
ಹಜ್ ನಿರ್ವಹಿಸ ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಗಿರುವವರ ವಿವರ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗಿದೆ. ಇವರ ಕೋರಿಕೆ ಸ್ವೀಕೃತವಾದರೆ ಪ್ಯಾಕೇಜುಗಳು ಲಭ್ಯವಾದ ಕೂಡಲೇ ಬುಕ್ ಮಾಡಲು ಆಗ್ರಹಿಸುವವರಿಗೆ ಮಾಹಿತಿಯನ್ನು ನೀಡಲಾಗುವುದು. ಈ ಹಿಂದೆ ಹಜ್ ನಿರ್ವಹಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj