ಹಜ್ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯಾ ಸಿದ್ದತೆ: ಸಿದ್ದತೆ ಹೇಗಿದೆ ಗೊತ್ತಾ..?
‘ಹಜ್ ಯಾತ್ರಾ’ ದಿನವನ್ನು ಸಕ್ಸಸ್ ಮಾಡಲು ಸೌದಿ ಅರೇಬಿಯಾ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಜ್ ನ ಭಾಗವಾಗಿ ಮಕ್ಕಾದ ಪ್ರವೇಶ ದ್ವಾರಗಳಲ್ಲಿ ಪಾರ್ಕಿಂಗ್ ಗೆ ಭಾರಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಐದು ಪಾರ್ಕಿಂಗ್ ಕೇಂದ್ರಗಳಲ್ಲಿ 50,000 ಕ್ಕಿಂತಲೂ ಹೆಚ್ಚು ವಾಹನಗಳ ಪಾರ್ಕ್ ಮಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಲಾಗುತ್ತಿದೆ.
ಮಕ್ಕಾದ ಪ್ರವೇಶ ದ್ವಾರಗಳಲ್ಲಿ 5 ಪಾರ್ಕಿಂಗ್ ಕೇಂದ್ರಗಳನ್ನು ತಯಾರಿಸಲಾಗಿದೆ. ಖಾಸಗಿಯಾಗಿ ಹಜ್ ಕರ್ಮ ನಿರ್ವಹಿಸಲು ಬರುವ ಯಾತ್ರಿಕರು ಈ ಪಾರ್ಕಿಂಗ್ ಕೇಂದ್ರಗಳಲ್ಲಿ ತಮ್ಮ ವಾಹನವನ್ನು ನಿಲುಗಡೆಗೊಳಿಸಬೇಕು. ಇಲ್ಲಿಂದ ಹೊರಗೆ ಹೋಗುವುದಕ್ಕೆ ಬಸ್ ವ್ಯವಸ್ಥೆ ಇದೆ.
ಹಜ್ ಸಂದರ್ಭದಲ್ಲಿ ಇಲ್ಲಿಗೆ ಬರುವ ಇತರ ವಾಹನಗಳನ್ನು ಕೂಡ ಇಲ್ಲಿಯೇ ಪಾರ್ಕಿಂಗ್ ಮಾಡಬೇಕು.
ಇನ್ನು ಈ ಪಾರ್ಕಿಂಗ್ ಸ್ಥಳದಲ್ಲಿ ವಿವಿಧ ಸೌಲಭ್ಯಗಳಿದ್ದು ಟಾಯ್ಲೆಟ್ ಗಳು, ಯಾತ್ರಿಕರಿಗೆ ಆರಾಮ ಮಾಡುವುದಕ್ಕೆ ಮತ್ತು ಕಾಯುವುದಕ್ಕೆ ಬೇಕಾದ ವ್ಯವಸ್ಥೆಗಳು, ಮಸೀದಿಗಳು ಕೂಡ ಇಲ್ಲಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw