ರಾಜ್ಯಾದ್ಯಂತ ಹಲಾಲ್ ವಿರೋಧಿ ಹೋರಾಟ ಸಮಿತಿಯ ಸ್ಥಾಪನೆ - Mahanayaka
10:02 PM Thursday 12 - December 2024

ರಾಜ್ಯಾದ್ಯಂತ ಹಲಾಲ್ ವಿರೋಧಿ ಹೋರಾಟ ಸಮಿತಿಯ ಸ್ಥಾಪನೆ

hindu janajagruti samiti
01/10/2022

ಭಾರತವು ‘ಸೆಕ್ಯುಲರ್’ ದೇಶವಾಗಿರುವಾಗ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಸಮಾಂತರವಾದ ‘ಇಸ್ಲಾಮೀ ಆರ್ಥಿಕವ್ಯವಸ್ಥೆ’ಯನ್ನು ಹಲಾಲ್ ಪ್ರಮಾಣಪತ್ರದ ಮೂಲಕ ಮಾಡಲಾಗುತ್ತಿದೆ. ಈ ಹಲಾಲ್ ಆರ್ಥಿಕ ವ್ಯವಸ್ಥೆಯಿಂದ ಭಾರತೀಯ ಆರ್ಥಿಕ ವ್ಯವಸ್ಥೆಗೆ ಹಾಗೂ ರಾಷ್ಟ್ರದ ಸುರಕ್ಷೆಗೆ ಅಪಾಯವು ಎದುರಾಗಿದೆ. ಇಂತಹ ಹಲಾಲ್ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸಲು ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಗಳಲ್ಲಿ ‘ಹಲಾಲ್ ವಿರೋಧಿ ಹೋರಾಟ ಸಮಿತಿ’ ಯನ್ನು ಸ್ಥಾಪಿಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ತಿಳಿಸಿದ್ದಾರೆ.

ಅವರು ಶನಿವಾರ ಸಂಜೆ ಮಂಗಳೂರು ನಗರದ ಬಲ್ಮಠದಲ್ಲಿರೋ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,  ‘ಹಲಾಲ್ ಪ್ರಮಾಣಪತ್ರ’ವು ಕೇವಲ ಮಾಂಸಕ್ಕಾಗಿ ಮಾತ್ರ ಸೀಮಿತವಾಗಿಲ್ಲ. ಅದು ಖಾದ್ಯ ಪದಾರ್ಥಗಳು, ಸೌಂದರ್ಯಸಾಧನಗಳು, ಔಷಧಿಗಳು, ಆಸ್ಪತ್ರೆಗಳು, ಗೃಹನಿರ್ಮಾಣ ಸಂಸ್ಥೆಗಳು, ಮಾಲ್ ಹೀಗೆ ಎಲ್ಲ ಕಡೆಗಳಲ್ಲಿ ಅನ್ವಯವಾಗತೊಡಗಿದೆ ಎಂದರು.

ವ್ಯಾಪಾರಿಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಪ್ರತಿಯೊಂದು ಉತ್ಪಾದನೆಗಾಗಿ 50 ಸಾವಿರ ರೂಪಾಯಿಗಳ ಶುಲ್ಕವನ್ನು ಭರಿಸಿ ‘ಹಲಾಲ್ ಪ್ರಮಾಣಪತ್ರ’ ಮತ್ತು ಅದರ ‘ಲೋಗೋ’ ವನ್ನು ಖರೀದಿಸಬೇಕಾಗಿದೆ. ಭಾರತ ಸರಕಾರದ ಇತರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ ಈ ಸಂಸ್ಥೆಗಳಿಂದ ಪ್ರಮಾಣಪತ್ರ ನೀಡುವ ಅಧಿಕೃತ ವ್ಯವಸ್ಥೆಯಿರುವಾಗ ಖಾಸಗಿ ಮುಸಲ್ಮಾನ ಸಂಸ್ಥೆಯಿಂದ ಈ ಪ್ರಮಾಣಪತ್ರವನ್ನು ಏಕೆ ಮತ್ತು ಯಾವುದಕ್ಕಾಗಿ ಪಡೆಯಬೇಕು? ಎಂದು ಪ್ರಶ್ನೆ ಮಾಡಿದರು.

ಭಾರತವು ಇಸ್ಲಾಮೀ ದೇಶವಲ್ಲ, ಇದು ಸೆಕ್ಯುಲರ್ ದೇಶವಾಗಿದೆ. ಹಾಗಾಗಿ ಸರಕಾರವು ಈ ಕಾನೂನುಬಾಹಿರ ಹಲಾಲ್ ಪ್ರಮಾಣಪತ್ರವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಭಾಜಪದ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟದ ದ.ಕ ಜಿಲ್ಲಾ ಸಹಸಂಚಾಲಕರಾದ ದಿನೇಶ ಕುಮಾರ್ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ