ಹಲವು ದಿನಗಳ ಅಸಮಾಧಾನ ಸ್ಫೋಟ: ಎಂ.ಪಿ.ಕುಮಾರಸ್ವಾಮಿ,  ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರ ನಡುವೆ ಗಲಾಟೆ - Mahanayaka

ಹಲವು ದಿನಗಳ ಅಸಮಾಧಾನ ಸ್ಫೋಟ: ಎಂ.ಪಿ.ಕುಮಾರಸ್ವಾಮಿ,  ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರ ನಡುವೆ ಗಲಾಟೆ

chikkamagaluru
28/03/2023

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಬಿಜೆಪಿ ಬಣ ರಾಜಕೀಯ ತಾರಕಕ್ಕೇರಿದ್ದು, ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಎಂ.ಎಲ್.ಸಿ. ಪ್ರಾಣೇಶ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.


Provided by

ಹಲವು ದಿನಗಳಿಂದ ಇಬ್ಬರು ನಾಯಕರ ನಡುವೆ ಇದ್ದ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಸ್ಟೇಷನ್ ಎದುರಿನ ಆಟೋ ನಿಲ್ದಾಣದ ವಿಚಾರದಲ್ಲಿ ಕಿರಿಕ್ ನಡೆದಿದ್ದು, ಪೊಲೀಸರ ಮುಂಭಾಗದಲ್ಲೇ ವಾರ್ ನಡೆದಿದೆ.

ಆಟೋ ನಿಲ್ದಾಣದ ಬಳಿ ನೆರಳಿಗಾಗಿ ಎಂ.ಎಲ್.ಸಿ. ಫ್ಲಡ್ ನಲ್ಲಿ ಶೆಡ್ ನಿರ್ಮಾಣ ಮಾಡಲಾಗಿತ್ತು. ಆದರೆ  ಶೆಡ್ ತೆರವಿಗೆ ಪಟ್ಣಣ ಪಂಚಾಯ್ತಿ ಮುಂದಾಗಿದೆ. ಇದು ಇಬ್ಬರು ಬಿಜೆಪಿ ನಾಯಕರ ನಡುವಿನ ಗಲಾಟೆಗೆ ಕಾರಣವಾಗಿದೆ. ಪೊಲೀಸರ ಎದುರೇ ಪರಸ್ಪರ ಕೈ—ಕೈ ಮಿಲಾಯಿಸಿದ್ದಾರೆ.


Provided by

ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದಲೂ  ಬಿಜೆಪಿ ನಾಯಕರ ನಡುವೆ ತಿಕ್ಕಾಟ ಆರಂಭಗೊಂಡಿದೆ. ಮೂಡಿಗೆರೆ ಬಿಜೆಪಿ ಟಿಕೆಟ್ ವಿಚಾರಕ್ಕೂ ಈ ಗಲಾಟೆಗೆ ಸಂಬಂಧದ ಇದೆ ಎನ್ನುವ ಶಂಕೆ ಇದೀಗ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ