ಹಲ್ದ್ವಾನಿ ಹಿಂಸಾಚಾರ ಪ್ರಕರಣ: 22 ಮಂದಿಗೆ ಜಾಮೀನು - Mahanayaka

ಹಲ್ದ್ವಾನಿ ಹಿಂಸಾಚಾರ ಪ್ರಕರಣ: 22 ಮಂದಿಗೆ ಜಾಮೀನು

12/03/2025

ಹಲ್ದ್ವಾನಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾ ಖಂಡ ನ್ಯಾಯಾಲಯವು 22 ಮಂದಿಗೆ ಜಾಮೀನು ನೀಡಿದೆ. ಜಸ್ಟಿಸ್ ಪಂಕಜ್ ಪುರೋಹಿತ್ ಮತ್ತು ಜಸ್ಟಿಸ್ ಮನೋಜ್ ಕುಮಾರ್ ತಿವಾರಿ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠವು ಈ ಜಾಮೀನು ಮಂಜೂರು ಮಾಡಿದೆ. ನಿಗದಿತ ಸಮಯದೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಿ ಈ ಜಾಮೀನು ಮಂಜೂರು ಮಾಡಿದೆ.

2024 ಫೆಬ್ರವರಿಯಿಂದ ಆರೋಪಿಗಳು ಜೈಲಲ್ಲಿದ್ದರು. ಇವರ ಜಾಮೀನು ಕೋರಿಕೆಯನ್ನು 2024 ಜುಲೈ 3ರಂದು ಹಲ್ದ್ವಾನಿ ಸೇಶೆನ್ಸ್ ಕೋರ್ಟ್ ತಳ್ಳಿ ಹಾಕಿತ್ತು. ಆದರೆ ಇದೀಗ ಸೆಷನ್ಸ್ ಕೋರ್ಟ್ ನ ತೀರ್ಪನ್ನು ಹೈಕೋರ್ಟು ಬದಿಗೆ ಸರಿಸಿದೆ. ಈ ಪ್ರಕರಣದ ತನಿಖೆಗೆ ಸೆಶನ್ಸ್ ಕೋರ್ಟ್ ಹೆಚ್ಚುವರಿ ಸಮಯ ನೀಡಿರುವುದನ್ನು ಹೈಕೋರ್ಟು ಪ್ರಶ್ನಿಸಿದೆ. ಯು ಏ ಪಿ ಏ ಅಡಿಯಲ್ಲಿ 90 ದಿನಗಳೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕಾಗಿದೆ. ಆದರೆ ನಿಗದಿತ ಸಮಯದೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸದೆ ಇರುವುದರಿಂದ ಆರೋಪಿಗಳು ಜಾಮೀನಿಗೆ ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಜಮೀಯತೆ ಉಲಮಾಯೆ ಹಿಂದ್ ನ ಅಧ್ಯಕ್ಷ ಮೌಲಾನ ಹರ್ಷದ್ ಮದನಿ ಅವರ ನೇತೃತ್ವದ ಹಲ್ದುವಾನಿ ಜಮೀಯತೆ ಉಲಮಾವು ಆರೋಪಿಗಳಿಗೆ ನ್ಯಾಯಾಂಗ ನೆರವನ್ನು ನೀಡಿದೆ. ಈ ಮೊದಲೇ 50 ಮಂದಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಈ ಬೆಳವಣಿಗೆಗೆ ಮೌಲಾನ ಸಂತಸ ವ್ಯಕ್ತಪಡಿಸಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ