ಹಳೆಯ 1 ರೂಪಾಯಿ ನಾಣ್ಯ ಇದ್ದರೆ ಸಾಕು ನೀವು ಲಕ್ಷಾಧಿಪತಿಯಾಗಬಹುದು!

ಕೆಲವೊಮ್ಮೆ ನಾವು ಉಪಯೋಗಕ್ಕೆ ಬಾರದ ವಸ್ತು ಎಂದು ಎಸೆದಿರುವ ವಸ್ತುಗಳಿಗೂ ಬೆಲೆ ಬಂದು ಬಿಡುತ್ತದೆ ಎನ್ನುವುದಕ್ಕೆ ಇದೇ ಸರಿಯಾದ ನಿದರ್ಶನ ಇರಬೇಕು. 500-1000 ರೂ. ಹಳೆಯ ನೋಟು ಬ್ಯಾನ್ ಆಗಿ ಕಾಗದದಷ್ಟೂ ಅದಕ್ಕೆ ಬೆಲೆ ಇಲ್ಲದಂತಾಯಿತು. ಆದರೆ, ಇದೀಗ ಹಳೆಯ ನಾಣ್ಯಕ್ಕೆ ಭಾರೀ ಬೆಲೆ ನೀಡಲಾಗುತ್ತಿದೆ.
ಹೌದು…! ನಿಮ್ಮ ಬಳಿಯಲ್ಲಿ ಹಳೆಯ 1 ರೂಪಾಯಿ ನಾಣ್ಯ ಇದ್ದರೆ ಸಾಕು ನೀವು ಲಕ್ಷಾಧಿಪತಿಯಾಗುವ ಸದಾವಕಾಶ ಇಲ್ಲಿದೆ. 19ನೇ ಶತಮಾನದ 1 ರೂಪಾಯಿಯ ಬೆಳ್ಳಿಯ ನಾಣ್ಯಕ್ಕೆ ಈಗ ಭರ್ಜರಿ ಬೇಡಿಕೆ ಆರಂಭವಾಗಿದೆ. 1916ನೇ ಇಸವಿಯ 1 ರೂಪಾಯಿಯ ಬೆಳ್ಳಿಯ ನಾಣ್ಯಕ್ಕೆ ಇದೀಗ ಚಿನ್ನಕ್ಕಿಂತಲೂ ದುಪ್ಪಟ್ಟು ಬೆಲೆ ನೀಡಿ ಕೊಂಡುಕೊಳ್ಳಲಾಗುತ್ತಿದೆ. ಈ ಒಂದು ನಾಣ್ಯದ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿಗಳು.
ನಿಮ್ಮ ಬಳಿಯಲ್ಲಿ 1916ನೇ ಇಸವಿಯ 1 ರೂಪಾಯಿಯ ನಾಣ್ಯ ಇದ್ದರೆ. ಇಂಡಿಯಾ ಮಾರ್ಟ್ ವೆಬ್ ಸೈಟ್ ಗೆ ಅದರ ಫೋಟೋಗಳನ್ನು ಅಪ್ ಲೋಡ್ ಮಾಡಿದರೆ ಸಾಕು. ಈ ನಾಣ್ಯವನ್ನು ಲಕ್ಷಾಂತರ ರೂಪಾಯಿಗಳನ್ನು ನೀಡಿ ಖರೀದಿಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.
ಇಂಡಿಯ ಮಾರ್ಟ್ ವೆಬ್ ಸೈಟ್ ನಲ್ಲಿ ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸಿ ಬಳಗವೇ ಇದ್ದು, ನೀವೂ ಈ ಹವ್ಯಾಸವನ್ನು ಹೊಂದಿದ್ದರೆ, ನೀವು ಕೂಡ ಲಕ್ಷಾಧಿಪತಿಗಳಾಗಬಹುದು. ಈ ಹಳೆಯ ಒಂದು ರೂಪಾಯಿ ನಾಣ್ಯಕ್ಕೆ ಇಂಡಿಯಾ ಮಾರ್ಟ್ ವೆಬ್ ಸೈಟ್ ನಲ್ಲಿ ಬರೊಬ್ಬರಿ 5 ಲಕ್ಷ ರೂಪಾಯಿ ಬೆಲೆ ಇದೆ ಎಂದು ಹೇಳಲಾಗಿದೆ.