ಹಳೆಯ ಹೇಳಿಕೆಗಳ ನವೀಕರಣಕ್ಕೆ ಸೀಮಿತವಾಯ್ತು ಸಿಎಂ ಪ್ರೆಸ್ ಮೀಟ್ | ಜನತೆಗೆ ನಿರಾಸೆ
13/05/2021
ಬೆಂಗಳೂರು: ಸಿಎಂ ಯಡಿಯೂರಪ್ಪನವರು ಇಂದು ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸದೇ, ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರ ನೀಡಿದ ಹೇಳಿಕೆಗಳನ್ನೇ ಪುನರಾವರ್ತಿಸಿ ಪ್ರೆಸ್ ಮೀಟ್ ಮುಗಿಸಿದರು.
ಇಂದು ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ಕರೆದಾಗ ರಾಜ್ಯದ ಜನತೆ ಹೊರ ನಿರೀಕ್ಷೆಯಲ್ಲಿದ್ದರು. ಇಡೀ ರಾಜ್ಯ ಜೀವನೋಪಾಯವನ್ನು ಕಳೆದುಕೊಂಡಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಯಾವುದೇ ವಿಶೇಷ ಪ್ಯಾಕೇಜ್ ಇಲ್ಲಿಯವರೆಗೆ ಘೋಷಿಸಿಲ್ಲ. ಸೋಂಕಿತರ ಜೀವ ಉಳಿಸುವುದು ನಮ್ಮ ಕರ್ತವ್ಯ ಎಂದಷ್ಟೆ ಸಿಎಂ ಪತ್ರಿಕಾಗೋಷ್ಠಿಯ ಮುಖ್ಯ ಅಂಶವಾಗಿತ್ತು.
ಕಠಿಣ ಕ್ರಮ ಜಾರಿ ಮಾಡಿರುವುದರಿಂದ ಜನರು ತೊಂದರೆಗೀಡಾಗಿದ್ದಾರೆ ನಿಜ. ಸಂಕಷ್ಟ ಅರಿತು ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟದ ವ್ಯವಸ್ಥೆ, ಬಿಪಿಎಲ್ ಕರ್ಡ್ ದಾರರಿಗೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗುವುದು. ವಿಶೇಷ ಪ್ಯಾಕೇಜ್ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಹೇಳುವ ಮೂಲಕ ಯಡಿಯೂರಪ್ಪ ಪ್ರೆಸ್ ಮೀಟ್ ಅಂತ್ಯಗೊಳಿಸಿದರು.