ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು! - Mahanayaka
8:52 AM Thursday 14 - November 2024

ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು!

syam
07/10/2021

ಉತ್ತರ ಕೆರೊಲಿನಾ:  ಯುವ ಸಮುದಾಯ ಸಾಮಾನ್ಯವಾಗಿ ಟೈಟ್ ಆಗಿರುವ ಉಡುಪುಗಳನ್ನು ಧರಿಸಲು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬರು ಟೈಟ್ ಆಗಿರುವ ಉಡುಪು ತೊಟ್ಟಿದ್ದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದಾರಂತೆ.

ಉತ್ತರ ಕೆರೊಲಿನಾದ ಯುವತಿ ಸ್ಯಾಮ್ ಇಂತಹದ್ದೊಂದು ಮಾಹಿತಿಯನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿ 80 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಟೈಟ್ ಹಾಫ್ ಜೀನ್ಸ್ ಸ್ಕರ್ಟ್ ಧರಿಸುತ್ತಿದ್ದ ಸ್ಯಾಮ್ಸ್ ಗೆ ಚರ್ಮದ ಸೋಂಕು ತಗಲಿತ್ತಂತೆ. ಇದರಿಂದ ಆಕೆ ತೀವ್ರವಾದ ಅನಾರೋಗ್ಯಕ್ಕೀಡಾಗುವಂತಾಗಿತ್ತು ಎಂದು ಆಕೆ ಹೇಳಿದ್ದಾಳೆ. ಆಕೆಗೆ ಇದರಿಂದ ಎಷ್ಟು ಆರೋಗ್ಯದ ಸಮಸ್ಯೆಯಾಗಿತ್ತೆಂದರೆ,  ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಹೋಗಿತ್ತಂತೆ.

ತನ್ನ ಬಾಯ್ ಫ್ರೆಂಡ್ ಜೊತೆಗೆ ಡೇಟ್ ಗೆ ಹೋಗಿದ್ದ ಸಂದರ್ಭದಲ್ಲಿ ಆಕೆ ಟೈಟ್ ಜೀನ್ಸ್ ಧರಿಸಿದ್ದಳಂತೆ. ಸುಮಾರು 8 ಗಂಟೆಗೂ ಅಧಿಕ ಕಾಲ ಜೀನ್ಸ್ ಧರಿಸಿದ್ದಳಂತೆ ಇದರಿಂದಾಗಿ ಆಕೆಗೆ ಸೊಂಟದ ಕೆಳ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತಂತೆ. ವೈದ್ಯರ ಬಳಿಗೆ ಹೋದಾಗ, ಚರ್ಮದ ಸೋಂಕು ತಗಲಿದೆ ಎಂದು ಹೇಳಿದ್ದರಂತೆ. ಹಾಗೆಯೇ ಅವಳು ದಾಖಲಾಗಿದ್ದು, ಆಕೆಗೆ ಸೆಪ್ಸಿಸ್ ಮತ್ತು ಸೆಲ್ಯುಲೈಟಿಸ್ ಆಗಿದೆ ಎಂದು ವೈದ್ಯರು ಹೇಳಿದರಂತೆ. ಚಿಕಿತ್ಸೆ ಮುಂದುವರಿಸಿದಾಗ ಆಕೆಯ ಆರೋಗ್ಯ ತೀವ್ರ ಅಸ್ವಸ್ಥ ಸ್ಥಿತಿಗೆ ತಲುಪಿದ್ದು, ಈ ವೇಳೆ ಆಕೆಯನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತಂತೆ ಆ ನಂತರ 6 ದಿನಗಳ ಬಳಿಕ ಆಕೆ ಸುಧಾರಿಸಿಕೊಂಡಿದ್ದಳಂತೆ. ಈ ವಿಚಾರ ಎಲ್ಲರಿಗೂ ತಿಳಿಯ ಬೇಕು ಎಂದು ಅವರು ಈ ವಿಡಿಯೋವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಆಸ್ಪತ್ರೆಯಲ್ಲಿ ಬೆಡ್ ಇಲ್ಲ: ಫುಟ್ಪಾತ್ ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ!

ಅರ್ಜಿ ನೀಡಲು ಬಂದ ಮಹಿಳೆಗೆ ಕಿರುಕುಳ: ಗ್ರಾ.ಪಂ. ಸದಸ್ಯನ ವಿರುದ್ಧ ದೂರು

2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!

ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ

ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!

ಆರೆಸ್ಸೆಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಅಜ್ಞಾನ, ಭೀತಿ, ವೈಯಕ್ತಿಕ ಹತಾಶೆಯಾಗಿದೆ | ಬಿ.ವೈ.ವಿಜಯೇಂದ್ರ ಕಿಡಿ

ಇತ್ತೀಚಿನ ಸುದ್ದಿ