ಹಲ್ಲು ನೋವಿಗೆ ಸರಳ  ಮನೆಮದ್ದು - Mahanayaka
9:00 AM Thursday 12 - December 2024

ಹಲ್ಲು ನೋವಿಗೆ ಸರಳ  ಮನೆಮದ್ದು

teeth pain
22/03/2022

ಹಲ್ಲು  ನೋವು  ಬಾರದವರು ತುಂಬಾ ವಿರಳ.  ಇತ್ತೀಚಿನ ದಿನಗಳಲ್ಲಿ  ಇತರ ನೋವುಗಳಂತೆ ಹಲ್ಲು ನೋವು ಕೂಡ ಸರ್ವೇ ಸಾಮಾನ್ಯವಾಗಿದೆ.. ಇಂತಹ ಹಲ್ಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವು ಮನೆಮದ್ದುಗಳು

ಉಪ್ಪು ನೀರು:

ಹಲ್ಲುನೋವಿನ ಸಮಯದಲ್ಲಿ ಉಪ್ಪು ನೀರಿನಿಂದ ಬಾಯಿ  ತೊಳೆಯುವುದು ಹಲ್ಲುನೋವು ಮತ್ತು ಹಲ್ಲಿನ ಆರೋಗ್ಯವನ್ನು ನಿವಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ.  ಹಲ್ಲುನೋವಿಗೆ ಇದು ಸರಳ ವಿಧಾನವಾದರೂ ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ.  ದಿನಕ್ಕೆ ಎರಡು ಅಥವಾ ಮೂರು ಬಾರಿ ಈತರ ಮಾಡುವುದು ಉತ್ತಮ.   ಹಲ್ಲುನೋವು ಮಾತ್ರವಲ್ಲದೆ ನಿರ್ಜಲೀಕರಣ, ಗಾಯ ಗಂಟಲು ನೋವು ನಿವಾರಣೆ ಆಗುತ್ತದೆ .

ಲವಂಗ:

ಹೆಚ್ಚು ಹಲ್ಲು ನೋವು ಬಂದಾಗ ತುಂಬಾ ಜನರು ಆಯ್ಕೆ ಮಾಡುವ ಸುಲಭದ ಮಾರ್ಗ ಲವಂಗ.ಇದು ನೋವನ್ನು ನಿಯಂತ್ರಿಸುವುದು ಮಾತ್ರವಲ್ಲ, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲವಂಗದ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ  ನೋಯುತ್ತಿರುವ ಹಲ್ಲಿನ ಮೇಲೆ ಲೇಪಿಸುವುದು ಅಥವಾ ಸ್ವಲ್ಪ ಬಿಸಿ ಲವಂಗ ಚಹಾವನ್ನು ಮಾಡಿ ಕುಡಿಯುವುದು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ ಹಲ್ಲುನೋವುಗೆ ಉತ್ತಮ ಮನೆಮದ್ದು. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನುಹೊಂದಿದ್ದು ಬ್ಯಾಕ್ಟೀರಿಯಾಗಳನ್ನು  ಕೊಲ್ಲುತ್ತದೆ. ಮತ್ತು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.  ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಉತ್ತಮ ಸೋಂಕುನಿವಾರಕವಿದೆ.

ಬೆಳ್ಳುಳ್ಳಿ ಎಸಳು ಅಗಿಯುವುದು ಅಥವಾ ಬೆಳ್ಳುಳ್ಳಿ ಪೇಸ್ಟ್ ಮಾಡಿ ನೋವಿನ ಜಾಗಕ್ಕೆ ಹಚ್ಚುವುದು ಉತ್ತಮ.  ಪೇಸ್ಟ್ ಮಾಡಿದ ಬೆಳ್ಳುಳ್ಳಿಗೆ ಉಪ್ಪು ಹಾಕಿ ಲೇಪಿಸದು ಕೂಡ ಉತ್ತಮ .

ಪೇರಲೆ ಎಲೆ:

ಪೇರಲೆ ಎಲೆಯನ್ನು ಬೇಯಿಸಿದ ನೀರಿನಿಂದ ಬಾಯಿಯನ್ನು ತೊಳೆಯುವುದು ಹಲ್ಲುನೋವು ಮಾತ್ರವಲ್ಲದೆ ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಪರಿಣಾಮಕಾರಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ