ಹಾಲುಣಿಸುವ ತಾಯಂದಿರಿಗಾಗಿ ರೈಲ್ವೆಯಿಂದ “ಬೇಬಿ ಬರ್ತ್”
ನವದೆಹಲಿ: ಮಕ್ಕಳಿಗೆ ಹಾಲುಣಿಸಲು ಹಾಗೂ ತಾಯಿಂದರ ಸುಖ ಪ್ರಯಾಣಕ್ಕಾಗಿ ಕೇಂದ್ರ ರೈಲ್ವೆ ಇಲಾಖೆ ಉತ್ತರ ಭಾರತದಲ್ಲಿ ಪ್ರಾಯೋಗಿಕವಾಗಿ “ಬೇಬಿ ಬರ್ತ್” ಆರಂಭಿಸಲಾಗಿದೆ.
ಪ್ರಯೋಗಿಕ ಹಂತದಲ್ಲಿ ಮಹಿಳಾ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆ ಡೆಲ್ಲಿ ವಿಭಾಗದಲ್ಲಿ ಹೊಸ ಭೋಗಿ ಚಾಲನೆ ನೀಡಿದ್ಧಾರೆ. ಹಸುಗೂಸುಗಳಿಗೆ ಹಾಲುಣಿಸಲು ಹಾಗೂ ಮಕ್ಕಳೊಂದಿಗೆ ತಾಯಿಂದರ ಸುಖ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಉತ್ತರ ಭಾರತದ ವಿಭಾಗೀಯ ಮಟ್ಟದಲ್ಲಿ ಈ ಹೊಸ ಪ್ರಯತ್ನ ನಡೆಸಲಾಗಿದೆ.
ಮಹಿಳಾ ದಿನಾಚರಣೆ ಅಂಗವಾಗಿ ಆರಂಭಿಸಿದ ಬೇಬಿ ಬರ್ತ್ ವಿಶೇಷ ಭೋಗಿ ಸಂಚಾರ ಆರಂಭಿಸಿದ್ದು, ಈ ಭೋಗಿಯಲ್ಲಿ ತಾಯಿ ಮತ್ತು ಮಗು ಒಟ್ಟಿಗೆ ಕುಳಿತುಕೊಳ್ಳಲು ಹಾಗೂ ಮಲಗಲು ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಗು ಕೆಳಗೆ ಬೀಳದಂತೆ ಬೆಲ್ಟ್ ನ ವ್ಯವಸ್ಥೆ ಕೂಡ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಈ 3 ವಿಷಯ ಸರ್ಚ್ ಮಾಡಿದರೆ ನೀವು ಜೈಲು ಸೇರುವುದು ಗ್ಯಾರಂಟಿ!
ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ ಅಂತ ಹೆಸರಿಡಿ: ಮತ್ತೊಂದು ವಿವಾದ ಆರಂಭ
ಧ್ವನಿವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ: ಎಷ್ಟು ಗಂಟೆವರೆಗೆ ಧ್ವನಿವರ್ಧಕ ಬಳಸಬಹುದು?
ವಿದ್ಯುತ್ ಸ್ಪರ್ಶದಿಂದ ಜೂ.ರವಿಚಂದ್ರನ್ ಸಾವು
ಮೈಸೂರು ಮೃಗಾಲಯ: ಮೂರು ಮರಿಗಳಿಗೆ ಜನ್ಮ ನೀಡಿದ ಬಿಳಿ ಹುಲಿ ತಾರಾ!