ಹಮಾಸ್ ನಾಯಕನ ಹತ್ಯೆ ಪ್ರಕರಣ: ಕತಾರ್ ನಲ್ಲಿ ಶುಕ್ರವಾರ ಹನಿಯ್ಯ ಅಂತ್ಯಸಂಸ್ಕಾರ
ಇವತ್ತು ಜುಲೈ 31 ರಂದು ಬೆಳಿಗ್ಗೆ ಇರಾನಿನಲ್ಲಿ ಹತ್ಯೆಗೀಡಾದ ಹಮಾಸ್ ನ ಮುಖಂಡ ಇಸ್ಮಾಯಿಲ್ ಹನಿಯ್ಯ ಅವರ ಅಂತ್ಯಸಂಸ್ಕಾರವು ಶುಕ್ರವಾರ ಕತಾರ್ ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮೃತ ದೇಹಕ್ಕೆ ಸಂಬಂಧಿಸಿ ಇರಾನಿನಲ್ಲಿ ನಡೆಯಬೇಕಾದ ಕಾನೂನು ಪ್ರಕ್ರಿಯೆಗಳ ಬಳಿಕ ಮೃತ ದೇಹವನ್ನು ದೋಹಾಗೆ ತಲುಪಿಸಲಾಗುವುದು ಎಂದು ಅಲ್ ಜಝೀರ ಚಾನೆಲ್ ವರದಿ ಮಾಡಿದೆ.
ಮಂಗಳವಾರ ಇರಾನ್ ಅಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ನಡೆದಿದ್ದು ಅದರಲ್ಲಿ ಹನಿಯ ಭಾಗವಹಿಸಿದ್ದರು ಮತ್ತು ಇರಾನಿನಲ್ಲಿಯೇ ತಂಗಿದ್ದರು. ಬುಧವಾರ ಬೆಳಗ್ಗೆ ಅವರು ವಾಸಿಸಿದ್ದ ಮನೆಯ ಮೇಲೆ ದಾಳಿ ನಡೆದಿದ್ದು ಅವರು ಹತ್ಯೆಗಿಡಾಗಿದ್ದಾರೆ. ಈ ದಾಳಿಯ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಇರಾನ್ ತಿಳಿಸಿದೆ.
ಹನಿಯ ಅವರು ಕತಾರ್ ನಲ್ಲಿ ವಾಸಿಸುತ್ತಿದ್ದು ಹಮಾಸ್ ನ ಚಟುವಟಿಕೆಗಳಿಗೆ ನೇತೃತ್ವ ನೀಡುತ್ತಿದ್ದರು. ಗಾಝಾದಲ್ಲಿ ನಡೆದ ಇಸ್ರೇಲ್ ದಾಳಿಯಲ್ಲಿ ಹನಿಯ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಇತ್ತೀಚಿಗೆ ಹತ್ಯೆಗೀಡಾಗಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth