ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರ್ಧಾರ

ಇಸ್ರೇಲಿ ಜೈಲಿನಲ್ಲಿ ಬಂಧಿತರಾಗಿರುವ 602 ಫೆಲೆಸ್ತೀನಿ ಕೈದಿಗಳ ಬದಲು ಆರು ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ನಿರ್ಧರಿಸಿದೆ. ಇದೇ ವೇಳೆ ಇಸ್ರೇಲಿ ಸೇನೆಯು 12 ಮತ್ತು 13 ವರ್ಷದ ಇಬ್ಬರು ಬಾಲಕರನ್ನು ಪಶ್ಚಿಮ ದಂಡೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದೆ.
ಇದಕ್ಕಿಂತ ಮೊದಲು ನಾಲ್ಕು ಮಂದಿ ಇಸ್ರೇಲ್ ಒತ್ತೆಯಾಳುಗಳ ಮೃತದೇಹವನ್ನು ಹಮಾಸ್ ಹಸ್ತಾಂತರಿಸಿತ್ತು. ಈ ಬಗ್ಗೆ ಇಸ್ರೇಲ್ ಹಲವು ಆರೋಪಗಳನ್ನ ಹೊರಸಿತ್ತು. ಅವರನ್ನು ಹಮಾಸ್ ಹತ್ಯೆ ಮಾಡಿ ನಮಗೆ ಹಸ್ತಾಂತರಿಸಿದೆ ಎಂದು ಹೇಳಿತ್ತು. ಆದರೆ ಹಮಾಸ್ 2023ರಲ್ಲೇ ಇವರು ಹತ್ಯೆಗೀಡಾಗಿರುವುದನ್ನು ಬಹಿರಂಗಪಡಿಸಿತ್ತು. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಈ ನಾಲ್ಕು ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಹೇಳಿತ್ತು. ಇದೀಗ ಇನ್ನೊಂದು ಹಂತದ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj