ಫೆಲೆಸ್ತೀನಿನ ಐಕ್ಯತೆ ಕುರಿತು ಚೀನಾ ಪ್ರಸ್ತಾಪ: ಹಮಾಸ್ ಮತ್ತು ಫತಹ್ ಒಪ್ಪಿಗೆ - Mahanayaka
6:04 PM Wednesday 30 - October 2024

ಫೆಲೆಸ್ತೀನಿನ ಐಕ್ಯತೆ ಕುರಿತು ಚೀನಾ ಪ್ರಸ್ತಾಪ: ಹಮಾಸ್ ಮತ್ತು ಫತಹ್ ಒಪ್ಪಿಗೆ

24/07/2024

ಫೆಲೆಸ್ತೀನಿನ ಐಕ್ಯತೆಗೆ ಸಂಬಂಧಿಸಿ ಚೀನಾದ ಪ್ರಸ್ತಾಪಕ್ಕೆ ಫೆಲೆಸ್ತೀನಿನ ಪ್ರಮುಖ ರಾಜಕೀಯ ಪಕ್ಷಗಳಾದ ಹಮಾಸ್ ಮತ್ತು ಫತಹ್ ಒಪ್ಪಿಗೆ ನೀಡಿದೆ ಎಂದು ಚೀನಾ ತಿಳಿಸಿದೆ. ಮೂರು ದಿನಗಳ ಕಾಲ ಚೀನಾದ ಬೀಜಿಂಗ್ ನಲ್ಲಿ ನಡೆದ ಚರ್ಚೆಯ ಬಳಿಕ ಒಪ್ಪಂದಕ್ಕೆ ಹಮಾಸ್ ಮತ್ತು ಫತಹ್ ಅಲ್ಲದೆ ಉಳಿದ ಸುಮಾರು 14 ರಷ್ಟು ಸಂಘಟನೆಗಳು ಕೂಡ ಒಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿದೆ. ಈ ಮೂಲಕ ಫೆಲಸ್ತೀನಿನ ಆಡಳಿತಾತ್ಮಕ ಬಿಕ್ಕಟ್ಟು ಕೊನೆಗೊಂಡಿದೆ ಎಂದು ಹೇಳಲಾಗಿದೆ.

ಈ ಒಪ್ಪಂದವು ಫೆಲೆ ಸ್ತೀನಿನ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಯುದ್ಧದ ಬಳಿಕ ಫೆಲಸ್ತೀನ್ ನಲ್ಲಿ ಏಕ ರಾಷ್ಟ್ರೀಯ ಸರ್ಕಾರ ರೂಪಿಸುವುದು ಈ ಒಪ್ಪಂದದ ಪ್ರಮುಖ ಅಂಶವಾಗಿದೆ. ತಕ್ಷಣವೇ ಕದನ ವಿರಾಮ ಏರ್ಪಡಿಸುವುದಕ್ಕೆ ಚೀನಾ ಆಗ್ರಹಿಸಿದೆ. ಮಾತ್ರ ಅಲ್ಲ ದ್ವಿರಾಷ್ಟ್ರ ಪರಿಹಾರಕ್ಕಾಗಿ ಅಂತರಾಷ್ಟ್ರೀಯ ಸೆಮಿನಾರನ್ನು ಚೀನಾ ಏರ್ಪಡಿಸಲಿದೆ ಎಂದು ವರದಿಗಳು ತಿಳಿಸಿವೆ.

ಫತಹ್ ನ ಕೇಂದ್ರ ಕಮಿಟಿಯ ಉಪ ಚೇರ್ಮನ್ ಆಗಿರುವ ಮಹಮ್ಮದ್ ಅಲೂಲ್, ಹಮಾಸ್ ನ ಮುಂಚೂಣಿ ನಾಯಕ ಮೂಸ ಅಬು ಮರ್ಝುಕ್, ಈಜಿಪ್ಟ್ ರಷ್ಯಾ ಅಲ್ಜೀರಿಯಾ ದ ರಾಯಭಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ